ನವದೆಹಲಿ: ಭಯೋತ್ಪಾದಕರ ಗುಂಡೇಟಿಗೂ ಜಗ್ಗದೆ 52 ಮಂದಿ ಅಮರನಾಥ ಯಾತ್ರಿಕರನ್ನು ರಕ್ಷಣೆ ಮಾಡಿದ ಗುಜರಾತಿನ ಬಸ್ ಡ್ರೈವರ್ ಎರಡನೇ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶೇಖ್ ಸಲೀಂ ಗಫೂರ್ ಅವರನ್ನು ‘ಉತ್ತಮ್ ಜೀವನ್ ರಕ್ಷಾ ಪದಕ’ಗೆ ಆಯ್ಕೆ ಮಾಡಲಾಗಿದೆ ಎಂದು ಗೃಹಸಚಿವಾಲಯ ಘೋಷಿಸಿದೆ.
2017ರ ಜುಲೈ.10ರಂದು ಗಫೂರ್ ಅವರು ಅಮರನಾಥ ಯಾತ್ರಿಕರನ್ನು ಹೊತ್ತಿದ್ದ ಬಸ್ನ್ನು ಚಲಾಯಿಸಿ ಸಾಗುತ್ತಿದ್ದರು. ಈ ವೇಳೆ ಜಮ್ಮುವಿನ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಗುಂಡು ಹಾರಿಸಲಾರಂಭಿಸಿದರು. ಆದರೆ ಜಗ್ಗದ ಗಫೂರ್ ಬಸ್ನ್ನು ನಿಲ್ಲಿಸದೆ ಚಲಾಯಿಸಿಕೊಂಡೇ ಮುಂದೆ ಸಾಗಿದರು. ಘಟನೆಯಲ್ಲಿ 8 ಮಂದಿ ಅಸುನೀಗಿದರು, 19 ಮಂದಿ ಗಾಯಗೊಂಡರು. ಆದರೆ ಗಫೂರ್ ತೋರಿಸಿದ ಅಪ್ರತಿಮ ಸಾಹಸದಿಂದಾಗಿ 52 ಮಂದಿ ಬದುಕುಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.