ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ 18 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಮೂವರು ಮಕ್ಕಳಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪಡೆದವರಲ್ಲಿ 7 ಮಂದಿ ಹೆಣ್ಣು ಮಕ್ಕಳು.
ಪ್ರಶಸ್ತಿ ಪಡೆದ ಮಕ್ಕಳೊಂದಿಗೆ ಸಂವಾದ ನಡೆಸಿದ ಮೋದಿ, ‘ನಿಮ್ಮ ಸಾಹಸ ಇತರ ಮಕ್ಕಳಿಗೂ ಪ್ರೇರಣೆ ನೀಡಲಿದೆ ಮತ್ತು ಅವರಲ್ಲಿ ಸದಾ ಆತ್ಮವಿಶ್ವಾಸವನ್ನು ತುಂಬಿಸಲಿದೆ’ ಎಂದರು.
‘ಪ್ರಶಸ್ತಿ ಪಡೆದ ಬಹುತೇಕ ಮಕ್ಕಳು ಗ್ರಾಮೀಣ ಭಾಗದವರು ಮತ್ತು ಬಡ ಹಿನ್ನಲೆಯಿಂದ ಬಂದವರು. ಅವರ ನಿತ್ಯದ ಸವಾಲುಗಳು, ಸಂಕಷ್ಟಗಳು ಅವರಲ್ಲಿ ಧೈರ್ಯ ಮತ್ತು ಸಾಹಸಿ ಮನೋಭಾವವನ್ನು ಮೂಡಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.