ನವದೆಹಲಿ: ಮುಂದಿನ 25 ವರ್ಷಗಳಲ್ಲಿ ಭಾರತ 3 ಜಾಗತಿಕ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅಸಿಯಾನ್-ಇಂಡಿಯ ಬ್ಯುಸಿನೆಸ್ ಆಂಡ್ ಇನ್ವೆಸ್ಟ್ಮೆಂಟ್ ಮೀಟ್ ಆಂಡ್ ಎಕ್ಸ್ಪೋದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಮತ್ತು ಅಸಿಯಾನ್ ರಾಷ್ಟ್ರಗಳ ಪ್ರಗತಿಯ ಕಥೊಂದೇ ತರನಾದುದು, ಪಶ್ಚಿಮ ರಾಷ್ಟ್ರಗಳು ವೇಗದಲ್ಲಿ ಪ್ರಗತಿ ಕಾಣುತ್ತಿದ್ದ ಸಂದರ್ಭ ನಮ್ಮ ಪ್ರಗತಿ ಕುಂಠಿತವಾಯಿತು. ಅಲ್ಲಿ ಕೈಗಾರಿಕ ಕ್ರಾಂತಿ ನಡೆಯುತ್ತಿದ್ದ ವೇಳೆ ನಾವು ಆರ್ಥಿಕ ಪ್ರಗತಿ ಸಾಧಿಸಲು ಪರದಾಡುತ್ತಿದ್ದೆವು ಎಂದಿದ್ದಾರೆ.
ಆದರೆ ಕಳೆದ ಕೆಲವು ವರ್ಷಗಳಿಂದ ನಾವು ವೇಗದ ಪ್ರಗತಿಯನ್ನು ಕಾಣುತ್ತಿದ್ದೇವೆ. ಜಗತ್ತು ಆರ್ಥಿಕ ಹಿಮ್ಮುಖವನ್ನು ಕಾಣುತ್ತಿದೆ, ಆದರೆ ನಮ್ಮ ಪ್ರದೇಶ ಪ್ರಗತಿಯಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.