ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಮಯಿಲಟ್ಟುಂಪರ ಗ್ರಾಮದ ಜನತೆ ಎರಡು ವರ್ಷಗಳ ಹಿಂದೆ ವನ್ಯ ಜೀವಿಗಳ ಬಾಧೆಯಿಂದ ವಿಪರೀತವಾಗಿ ಜರ್ಜರಿತಗೊಂಡಿದ್ದರು. ಅವರು ಬೆಳೆಯುತ್ತಿದ್ದ ಬೆಳೆಗಳೆಲ್ಲಾ ಆನೆಗಳ ಪಾಲಾಗುತ್ತಿದ್ದವು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು ಅವರ ಪರಿಸ್ಥಿತಿ.
ವಿದ್ಯುತ್ ಬೇಲಿ, ಸಾಂಪ್ರಾದಾಯಿಕ ಡ್ರಮ್ ಮುಂತಾದ ವಸ್ತುಗಳನ್ನು ಅಳವಡಿಸಿದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಇದು ಅಲ್ಲಿನ ಜನತೆಯನ್ನು ಕಂಗೆಡಿಸಿತ್ತು. ಕೊನೆಗೂ ಚಿಂತನೆ ನಡೆಸಿ ನಡೆಸಿ ಅವರು ತಮ್ಮ ಸಂಕಷ್ಟಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.
2.5 ಕಿಲೋ ಮೀಟರ್ ಸುತ್ತ 18 ಗ್ರಾಮಗಳನ್ನು ಒಳಗೊಳ್ಳುವಂತೆ ಜೇನು ನೊಣದ ಶಬ್ದ ಕೊಡುವ ವೈಯರ್ ಫೆನ್ಸ್ನ್ನು ಕೃತಕ ಜೇನು ಗೂಡುಗಳನ್ನು ನೇತಾಡಿಸಲಾಗಿದೆ. ಆನೆಗಳು ಸಮೀಪಕ್ಕೆ ಬಂದ ತಕ್ಷಣ ಇದು ಸೌಂಡ್ ಮಾಡಲಾರಂಭಿಸುತ್ತದೆ. ಜೇನು ನೊಣದ ಸೌಂಡ್ ಎಂದು ಭಾವಿಸಿ ಆನೆಗಳು ಸ್ಥಳದಿಂದ ಕಾಲ್ಕೀಲುತ್ತವೆ.
ಇದೀಗ ಇಲ್ಲಿನ ಜನರು ಬಾಳೆ, ರಬ್ಬರ್ ಸೇರಿದಂತೆ 60ಕ್ಕೂ ಅಧಿಕ ಬೆಳೆಗಳನ್ನು ಬೆಳೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.