ದಾವೋಸ್: ಭಾರತವೆಂದರೆ ಉದ್ದಿಮೆ ಎಂದರ್ಥ ಮತ್ತು ಅದು ಜಾಗತಿಕ ವ್ಯವಹಾರಗಳಿಗೆ ಅವಕಾಶಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ಹೇಳಿದ್ದಾರೆ.
ಔತನಕೂಟಕ್ಕೂ ಮುನ್ನ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಪ್ರಗತಿಯ ಹಾದಿಯನ್ನು ವಿವರಿಸಿದರು. ‘ಭಾರತವೆಂದರೆ ಉದ್ದಿಮೆ’ ಎಂಬ ಟ್ಯಾಗ್ಲೈನ್ನಲ್ಲಿ ಸಭೆ ನಡೆದಿದ್ದು, ಜಾಗತಿಕ ಕಂಪನಿಗಳ 40 ಸಿಇಓಗಳು ಮತ್ತು ಭಾರತದ 20 ಸಿಇಓಗಳು ಇದರಲ್ಲಿ ಪಾಲ್ಗೊಂಡರು.
ಮೋದಿಯವರಿಗೆ ವಿಜಯ್ ಗೋಖಲೆ, ಜೈ ಶಂಕರ್, ರಮೇಶ್ ಅಭಿಷೇಕ್ರಂತಹ ಉನ್ನತ ಸರ್ಕಾರಿ ಅಧಿಕಾರಿಗಳು ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.