ನವದೆಹಲಿ: ಈಗಾಗಲೇ ಎಂ.ಟಿ.ಸಿ.ಆರ್ ಮತ್ತು ವಾಸ್ಸೆನರ್ನಂತಹ ಎರಡು ಪ್ರಮುಖ ರಫ್ತು ನಿಯಂತ್ರಣ ಆಡಳಿತಗಳಿಗೆ ಎಂಟ್ರಿ ಪಡೆದುಕೊಂಡಿರುವ ಭಾರತ ಇದೀಗ ರಫ್ತುಗಳು ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಕಾರಣವಾಗುವುದಿಲ್ಲ ಎಂಬುದನ್ನು ಖಚಿತಪಡಿಸುವ ಆಸ್ಟ್ರೇಲಿಯಾ ಗ್ರೂಪ್ (ಎಜಿ)ಯನ್ನು ಸೇರ್ಪಡೆಗೊಂಡಿದೆ.
‘ಜನವರಿ 19ರಂದು ಭಾರತ ಔಪಚಾರಿಕವಾಗಿ ಆಸ್ಟ್ರೇಲಿಯಾ ಗ್ರೂಪ್ (ಎಜಿ) ಯ 43ನೇ ಸದಸ್ಯ ರಾಷ್ಟ್ರವಾಯಿತು. ದೇಶ ಅಥವಾ ಭಯೋತ್ಪಾದನ ಸಂಘಟನೆಗಳಿಂದ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಅಥವಾ ಸ್ವಾಧೀನಕ್ಕೆ ಕಾರಣವಾಗುವ ವಸ್ತುಗಳು, ಉಪಕರಣಗಳು ಮತ್ತು ತಂತ್ರಜ್ಞಾನಗಳ ಹರಡುವಿಕೆಯನ್ನು ತಡೆಯುವ ಕಾರ್ಯವನ್ನು ಎಜಿ ಗ್ರೂಪ್ನ ಸದಸ್ಯ ರಾಷ್ಟ್ರಗಳು ಸ್ವಯಂಪ್ರೇರಣೆಯಿಂದ ಮಾಡುತ್ತಿವೆ’ ಎಂದು ಎಜಿ ಹೇಳಿದೆ.
ಎಜಿಗೆ ಭಾರತದ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು, ’ಇದು ಪರಸ್ಪರ ಪ್ರಯೋಜನಕಾರಿ ಮತ್ತು ಪ್ರಸರಣ ನಿರೋಧಕ್ಕೆ ಸಹಾಯ ಮಾಡಲಿದೆ” ಎಂದು ಹೇಳಿದರು.
ಸದಸ್ಯತ್ವ ಭಾರತದ ರುಜುವಾತನ್ನು ಮತ್ತಷ್ಟು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ 2016 ರಲ್ಲಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮೆಂಟ್ (ಎಂ.ಟಿ.ಸಿ.ಆರ್) ಮತ್ತು ಕಳೆದ ವರ್ಷ ವಾಸ್ಸೆನರ್ ಅರೇಂಜ್ಮೆಂಟ್ಗೆ ಸೇರ್ಪಡೆಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.