ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ.10ರಂದು ಪ್ಯಾಲೇಸ್ತೇನ್ಗೆ ಭೇಟಿಕೊಡಲಿದ್ದಾರೆ. ಈ ಮೂಲಕ ಆ ರಾಷ್ಟ್ರಕ್ಕೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಅವರು ಜೋರ್ಡನ್ನ ಅಮ್ಮನ್ನಿಂದ ಹೆಲಿಕಾಫ್ಟರ್ ಮೂಲಕ ಪ್ಯಾಲೇಸ್ತೇನ್ನ ಆಡಳಿತಾತ್ಮಕ ರಾಜಧಾನಿ ರಮಲ್ಲಾಗೆ ಬಂದಿಳಿಯಲಿದ್ದಾರೆ. ಮೋದಿ ತೆರಳಲಿರುವ ಮಾರ್ಗ ಜೆರುಸಲೇಂನಿಂದ ಕೇವಲ 8ಕಿಮೀ ದೂರದಲ್ಲಿದೆ.
ಬದ್ಧ ವೈರಿಗಳಾದ ಇಸ್ರೇಲ್ ಮತ್ತು ಪ್ಯಾಲೇಸ್ತೇನ್ನೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಮೋದಿ ಸರ್ಕಾರ ಬಯಸುತ್ತಿದೆ. ಭಾರತದಲ್ಲಿ ಇಸ್ರೇಲ್ ಪ್ರಧಾನಿಗೆ ರಾಜಾಥಿತ್ಯ ನೀಡಿದ ಬಳಿಕ ಅವರು ಪ್ಯಾಲೇಸ್ತೇನ್ನೊಂದಿಗೆ ಬಾಂಧವ್ಯ ಬೆಸೆಯುವ ಕಾರ್ಯದಲ್ಲಿ ನಿರತರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.