ಚೆನ್ನೈ: 193 ದೇಶಗಳ 3 ಸಾವಿರ ಎಂಟ್ರಿಗಳನ್ನು ಸೋಲಿಸುವ ಮೂಲಕ ತಮಿಳುನಾಡಿನ ಶಾಲಾ ಮಕ್ಕಳು ಮಾಡಿದ ಆರ್ಟ್ವರ್ಕ್ ನಾಸಾದ 2018ರ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ಕ್ಯಾಲೆಂಡರ್ ಆರ್ಟ್ ಕಾಂಟೆಸ್ಟ್ನಲ್ಲಿ ಜಾಗ ಪಡೆದುಕೊಂಡಿದೆ.
ಪಳನಿ ಪುಷ್ಪತೂರ್ನ ಶ್ರೀ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ 11 ವರ್ಷದ ಕಾವ್ಯ ಬಿಜೆ, ಕೆ.ಸೆಲ್ವ ಶ್ರೀಜಿತ್ ಮಾಡಿದ ಆರ್ಟ್ವರ್ಕ್ 12 ವಿಜೇತ ಎಂಟ್ರಿಗಳ ಪೈಕಿ ಒಂದಾಗಿದ್ದು, ನಾಸಾದ ಕ್ಯಾಲೆಂಡರ್ ಪುಟಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಗಗನಯಾತ್ರೆ, ಬಾಹ್ಯಾಕಾಶದಲ್ಲಿ ಹೆಚ್ಚಿತ್ತಿರುವ ಆಹಾರಗಳ ಬಗ್ಗೆ ಸೆಲ್ವ ಮತ್ತು ಕಾವ್ಯಾ ಆರ್ಟ್ವರ್ಕ್ ಮಾಡಿ ಕಾಂಟೆಸ್ಟ್ಗೆ ಕಳುಹಿಸಿದ್ದರು. ಅವರ ಕ್ರಿಯೇಟಿವಿಟಿ ನಿಜಕ್ಕೂ ಅದ್ಭುತ ಎನಿಸಿದೆ.
ಬಾಹ್ಯಾಕಾಶದಲ್ಲಿನ ವೈವಿಧ್ಯ ಜೈವಿಕ ಗಾರ್ಡನ್ಗಳನ್ನು ಅದ್ಭುತವಾಗಿ ಇವರು ಚಿತ್ರಿಸಿದ್ದಾರೆ. ಗಗನಯಾತ್ರಿಗಳು ಪ್ಯಾಂಕಿಂಗ್ ಫುಡ್ಗಳ ಬದಲು ಅಲ್ಲಿನ ಆಹಾರಗಳನ್ನೇ ಸೇವಿಸಬಹುದು ಎಂಬುದನ್ನು ವರ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.