ಮುಂಬಯಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಗುರುವಾರ ಮುಂಬಯಿಯಲ್ಲಿ ‘ಶಲೋಮ್ ಬಾಲಿವುಡ್’ ಸಮಾರಂಭದಲ್ಲಿ ಭಾಗಿಯಾಗಿ ಹಿಂದಿ ಚಿತ್ರರಂಗದ ದಿಗ್ಗಜರೊಂದಿಗೆ ತುಸು ಕಾಲ ಕಳೆದರು.
ಈ ವೇಳೆ ಮಾತನಾಡಿದ ನೆತನ್ಯಾಹು, ತಾನು ಬಾಲಿವುಡ್ ಸಿನಿಮಾಗಳ ಅಪ್ಪಟ ಅಭಿಮಾನಿ ಎಂಬುದನ್ನು ಬಹಿರಂಗಪಡಿಸಿದರು. ‘ಜಗತ್ತು ಬಾಲಿವುಡನ್ನು ಪ್ರೀತಿಸುತ್ತದೆ, ಇಸ್ರೇಲ್ ಬಾಲಿವುಡನ್ನು ಪ್ರೀತಿಸುತ್ತದೆ, ನಾನೂ ಬಾಲಿವುಡ್ನ್ನು ಪ್ರೀತಿಸುತ್ತೇನೆ’ ಎಂಬ ಅವರ ಮಾತನ್ನು ಬಾಲಿವುಡ್ ದಿಗ್ಗಜರು ಕರತಾಡನದ ಮೂಲಕ ಸ್ವಾಗತಿಸಿದರು.
ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಕರಣ್ ಜೋಹಾರ್, ಇಮ್ತಿಯಾಝ್ ಅಲಿ ಖಾನ್, ಸುಭಾಷ್ ಘಾಯ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡು, ನೆತನ್ಯಾಹು ದಂಪತಿ ಜೊತೆ ಸೆಲ್ಫಿ, ಉಪಹಾರ ಸೇವಿಸಿ ಸಂಭ್ರಮಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.