ನವದೆಹಲಿ: ಇನ್ನು ಮುಂದೆ ಆಧಾರ್ ಕಾರ್ಡ್ಗೆ ಮುಖ ಗುರುತಿಸುವಿಕೆ ಆಧಾರಿತ (face- recognition based authentication ) ದೃಢೀಕರಣವನ್ನು ತರುವುದಾಗಿ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಘೋಷಿಸಿದೆ.
ಜುಲೈ 1ರಿಂದ ಈ ಹೊಸ ದೃಢೀಕರಣ ಬರಲಿದೆ. ವಯಸ್ಸಾದವರು ಅಥವಾ ಫಿಂಗರ್ಪ್ರಿಂಟ್ ಸಮಸ್ಯೆ ಹೊಂದಿರುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.
ಪ್ರಸ್ತುತ ಕಣ್ಣಿನ ಪೊರೆ ದೃಢೀಕರಣ, ಬೆರಳಚ್ಚು ದೃಢೀಕರಣ ಪ್ರಕ್ರಿಯೆಗಳಿವೆ. ಇನ್ನು ಮುಂದೆ ಮುಖ ಗುರುತಿಸುವಿಕೆ ಹೊಸದಾಗಿ ಬರಲಿದೆ.
ಆಧಾರ್ ಬಳಕೆದಾರರಿಗೆ ಮತ್ತೊಂದು ಸುತ್ತಿನ ಸುರಕ್ಷತೆಯನ್ನು ಕಲ್ಪಿಸಲು ಈ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.