ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರು ನವದೆಹಲಿಯಲ್ಲಿನ ತೀನ್ ಮೂರ್ತಿ ಮೆಮೋರಿಯಲ್ನ ಸಮಾರಂಭದಲ್ಲಿ ಭಾಗವಹಿಸಿ ಅದಕ್ಕೆ ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಿದರು.
ಇಬ್ಬರು ಮುಖಂಡರೂ ಮಾಲಾರ್ಪಣೆ ಮಾಡಿ, ವಿಸಿಟರ್ಸ್ ಬುಕ್ನಲ್ಲಿ ಅನಿಸಿಕೆ ಬರೆದರು.
15ನೇ ಇಂಪೀರಿಯಲ್ ಕವಲ್ರಿ ಬ್ರಿಗೇಡ್ನಲ್ಲಿದ್ದ ಹೈದರಾಬಾದ್, ಜೋಧ್ಪುರ ಮತ್ತು ಮೈಸೂರು ಲ್ಯಾನ್ಸರ್ಗಳನ್ನು ಪ್ರತಿನಿಧಿಸುವ 3 ಮೂರ್ತಿ ಈ ಮೆಮೋರಿಯಲ್ನಲ್ಲಿದೆ. ಈ ಬ್ರಿಗೇಡ್ ಮೊದಲನೇ ವಿಶ್ವಯುದ್ಧದ ಸಂದರ್ಭ 1918ರ ಸೆ.23ರಂದು ಹೈಫಾ ನಗರಕ್ಕಾಗಿ ಹೋರಾಡಿ ಅದನ್ನು ಸ್ವತಂತ್ರಗೊಳಿಸಿತ್ತು. ಇದಕ್ಕಾಗಿ 44 ಭಾರತೀಯ ಸೈನಿಕರು ಪ್ರಾಣ ತೆತ್ತಿದ್ದರು.
ಭಾರತೀಯ ಸೈನಿಕರ ಸ್ಮರಣಾರ್ಥ ತೀನ್ ಮೂರ್ತಿ ಹೈಫಾ ಚೌಕ್ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.