ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಯೋಜನೆಗೆ ಒಳಪಡುತ್ತಿರುವ ಹುಬ್ಬಳ್ಳಿ-ಧಾರವಾಡದ ಜನತೆ ಶೀಘ್ರದಲ್ಲೆ ತಮ್ಮ ಎಲೆಕ್ಟ್ರಿಕ್ ವೆಹ್ಹಿಕಲ್ಗೆ ಚಾರ್ಜ್ ಮಾಡಲು ಸ್ಮಾರ್ಟ್ ಪೋಲ್ಸ್ಗಳನ್ನು ಹೊಂದಲಿದ್ದಾರೆ, ಇದು ವೈಫೈ ಹಾಟ್ಸ್ಪಾಟ್ ಆಗಿಯೂ ಕಾರ್ಯನಿರ್ವಹಿಸಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಪ್ರತಿ ಸ್ಮಾರ್ಟ್ ಪೋಲ್ ತಲಾ ರೂ.10 ಲಕ್ಷದೊಂದಿಗೆ ನಿರ್ಮಾಣವಾಗಲಿದೆ ಎಂದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಲಿಮಿಟೆಡ್(ಎಚ್ಡಿಎಸ್ಸಿಎಲ್)ನ ವಿಶೇಷ ಅಧಿಕಾರಿ ಎಸ್ಎಚ್ ನರೆಗಲ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಛೇರಿ, ನೃಪತುಂಗ ಬೆಟ್ಟ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಈ ಸ್ಮಾರ್ಟ್ಪೋಲ್ಗಳು ಅಳವಡಿಕೆಯಾಗಲಿದೆ.
ಸ್ಮಾರ್ಟ್ ಪೋಲ್ಗಳನ್ನು ಡಿಸೈನ್-ಬಿಲ್ಡ್-ಫಿನಾನ್ಸ್-ಆಪರೇಟ್-ಟ್ರಾನ್ಸ್ಫರ್(ಡಿಬಿಎಫ್ಒಟಿ) ಅಡಿಯಲ್ಲಿ ಪಬ್ಲಿಕ್ ಪ್ರೈವೇಟ್ ಪಾಟ್ನರ್ಶೀಪ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.