ನವದೆಹಲಿ: ಅನಾಣ್ಯೀಕರಣ, ಜಿಎಸ್ಟಿ, ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಆಕ್ಟ್ ಅನುಷ್ಠಾನದ ಕಾರಣದಿಂದಾಗಿ 2017ರಲ್ಲಿ ರಿಸಿಡೆಂನ್ಶಿಯಲ್ ರಿಯಲ್ ಎಸ್ಟೇಟ್ ದರಗಳು ಇಳಿಕೆಯಾಗಿತ್ತು ಎಂದು ವರದಿ ಹೇಳಿದೆ.
ನೈಟ್ ಫ್ರಾಂಕ್ ರಿಪೋರ್ಟ್ ಪ್ರಕಾರ, ನಗರಗಳಾದ್ಯಂತ ದರಗಳು ಶೇ.3ರಷ್ಟು ಕಡಿಮೆಯಾಗಿದೆ, ಪುಣೆಯಲ್ಲಿ ಅತೀಹೆಚ್ಚು ಅಂದರೆ ಶೇ.7ರಷ್ಟು ಕಡಿಮೆಯಾಗಿದೆ. ಮುಂಬಯಿಯಲ್ಲಿ ಶೇ.5ರಷ್ಟು ಕಡಿಮೆಯಾಗಿದೆ. ಕಳೆದ 6 ವರ್ಷಗಳಿಂದ ದರದಲ್ಲಿ ಇಳಿಕೆ ಕಾಣುತ್ತಿರುವ ಎನ್ಸಿಆರ್ನಲ್ಲಿ ಶೇ.2ರಷ್ಟು ಇಳಿಕೆಯಾಗಿತ್ತು ಎಂದಿದೆ.
ಬೇಡಿಕೆಯಲ್ಲಿ ಇಳಿಕೆಯಾಗಿರುವುದೇ ದರಗಳು ಇಳಿಯಲು ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
ಹೊಸ ಚಾಲನೆಗಳಲ್ಲಿ ಕೈಗೆಟುಕುವ ದರಗಳ ಮನೆಗಳ ಪ್ರಮಾಣ ಶೇ.53ರಿಂದ ಶೇ.83ಕ್ಕೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.