ಮುಂಬಯಿ: ದೇಶದ ಮೊದಲ ಸಂಪೂರ್ಣ ಮಹಿಳಾ ಕೇಂದ್ರಿತ ರೈಲ್ವೇ ನಿಲ್ದಾಣ ಎನಿಸಿರುವ ಮುಂಬಯಿ ಡಿವಿಶನ್ನ ಮಾತುಂಗ ರೈಲ್ವೇ ನಿಲ್ದಾಣ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ 2018ಗೆ ಸೇರ್ಪಡೆಗೊಂಡಿದೆ.
ಈ ರೈಲ್ವೇ ನಿಲ್ದಾಣದ ಪ್ರತಿಯೊಂದು ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ. ಇಲ್ಲಿ ಒಟ್ಟು 41 ಸಿಬ್ಬಂದಿಗಳಿದ್ದು, 17 ಬುಕಿಂಗ್ ಕ್ಲರ್ಕ್ಸ್, 2 ಘೋಷಕರು, 2 ಸ್ವಚ್ಛತಾ ಸಿಬ್ಬಂದಿಗಳು, ೮ ಟಿಕೆಟ್ ಪರಿಶೀಲಕರು, 5 ಪಾಯಿಂಟ್ ಪರ್ಸನ್ಗಳು ಇದ್ದು ಇವರೆಲ್ಲಾ ಮಹಿಳೆಯರೇ ಆಗಿದ್ದಾರೆ.
ಈ ರೈಲು ನಿಲ್ದಾಣದ ಮ್ಯಾನೇಜರ್ ಮಮತಾ ಕುಲಕರ್ಣಿಯವರ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿಗಳು ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಮಹಿಳೆಯರೇ ನಿರ್ಧಾರ ತೆಗೆದುಕೊಂಡು ಕಾರ್ಯನಿರ್ವಹಿಸುವ ಪ್ರಕ್ರಿಯೆಯನ್ನು ಉತ್ತೇಜಿಸಲು ಈ ನಿಲ್ದಾಣವನ್ನು ಮಹಿಳಾ ಪ್ರಧಾನಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.