ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಸಂಬಂಧಿಸಿದ ಹಲವಾರು ತಿದ್ದುಪಡಿಗಳಿಗೆ ಅನುಮೋದನೆಗಳನ್ನು ನೀಡಲಾಯಿತು.
‘ದೇಶದಲ್ಲಿ ಸುಲಲಿತ ವ್ಯವಹಾರ ನಡೆಸಲು ಸಹಕಾರಿಯಾಗುವಂತೆ ಎಫ್ಡಿಐ ಪಾಲಿಸಿಯನ್ನು ಸರಳ ಮತ್ತು ಉದಾರಗೊಳಿಸುವ ಸಲುವಾಗಿ ತಿದ್ದುಪಡಿಯನ್ನು ತರಲಾಗುತ್ತಿದೆ. ಇದರಿಂದಾಗಿ ಎಫ್ಡಿಐ ಹರಿಯುವಿಕೆ, ಆದಾಯ ಮತ್ತು ಉದ್ಯೋಗಗಳಲ್ಲಿ ಹೆಚ್ಚಳವಾಗಲಿದೆ’ ಎಂದು ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.
ಅಟೋಮ್ಯಾಟಿಕ್ ರೂಟ್ (ಕೇಂದ್ರ ಸರ್ಕಾರ ಅಥವಾ ಅರ್ ಬಿ ಐ ಅನುಮೋದನೆ ಇಲ್ಲದೇ ಹೂಡಿಕೆ) ಮೂಲಕ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಪ್ರಸ್ತಾಪಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇದಲ್ಲದೇ ವಾಯುಯಾನ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಎಫ್ ಡಿಐ ನಿಯಮಾವಳಿಗಳ ಸಡಿಲಿಕೆಗೂ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹಾಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಏರ್ ಇಂಡಿಯಾಗಾಗಿ ವಿಮಾನಯಾನ ಕ್ಷೇತ್ರದಲ್ಲಿ ಅನುಮೋದಿತ ಮಾರ್ಗದ ಮೂಲಕ ಶೇ.೪೯ರಷ್ಟು ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.