ನವದೆಹಲಿ: ಡವೊಸ್ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ಸೈಡ್ಲೈನ್ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮೋದಿ ಮತ್ತು ಟ್ರಂಪ್ ಭಾಗವಹಿಸುವುದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಟ್ರಂಪ್ 18 ವರ್ಷಗಳ ಬಳಿಕ ಇದರಲ್ಲಿ ಭಾಗವಹಿಸುತ್ತಿರುವ ಅಮೆರಿಕಾ ಅಧ್ಯಕ್ಷ. ಮೋದಿ 20 ವರ್ಷಗಳ ಬಳಿಕ ಭಾಗವಹಿಸುತ್ತಿರುವ ಭಾರತದ ಪ್ರಧಾನಿ.
ಈ ಇಬ್ಬರು ಮುಖಂಡರು ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸುತ್ತಿರುವುದು ಈಗಾಗಲೇ ಭಾರೀ ಸುದ್ದಿ ಮಾಡುತ್ತಿದೆ.