ಕಾನ್ಪುರ: ಒಂದು ವಾಟ್ಸಾಸ್ ಮೆಸೇಜ್ನಿಂದಾಗಿ ಐಐಟಿ ಕಾನ್ಪುರ 10 ವರ್ಷಗಳ ಹಿಂದೆ ವಿನ್ಯಾಸಪಡಿಸಿದ್ದ ವೇದ, ಶಾಸ್ತ್ರ, ಪ್ರಾಚೀನ ಗ್ರಂಥಗಳ ಬಗೆಗೆ ಮಾಹಿತಿ ಇರುವ ಆನ್ಲೈನ್ ವೆಬ್ಸೈಟ್ ಈಗ ಭಾರೀ ಪ್ರಚಾರ ಪಡೆಯುತ್ತಿದೆ.
ಕಳೆದ ಅಕ್ಟೋಬರ್ನಲ್ಲಿ ಈ ‘ಗೀತಾ ಸೂಪರ್ಸೈಟ್’ ವೆಬ್ ಪೇಜ್ ನಿತ್ಯ ಎವರೇಜ್ 500 ಮೂಲಕ ದಿನಕ್ಕೆ 24 ಸಾವಿರ ಹಿಟ್ಸ್ ಪಡೆಯಲಾರಂಭಿಸಿತು. ಏಕಾಏಕಿ ಈ ಬೆಳವಣಿಗೆಗೆ ಏನು ಕಾರಣ ಏನು ಎಂದು ಹುಡುಕಲು ಹೊರಾಟಗ ಸಿಕ್ಕಿದ್ದು ಒಂದು ವಾಟ್ಸಾಸ್ ಸಂದೇಶ.
’ಕೊನೆಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿರುವ ಯಾರೋ ಒಬ್ಬರು ಅನೇಕ ವರ್ಷಗಳ ಹಿಂದೆಯೇ ಇದ್ದ ಜ್ಞಾನವನ್ನು ಹುಡುಕಿ ಮಾಹಿತಿ ನೀಡಿದ್ದಾರೆ’ ಎಂಬ ಸಂದೇಶ ವಾಟ್ಸಾಪ್ನಲ್ಲಿ ಹರಿದಾಡಿತ್ತು. ಅದರಿಂದಲೇ ಈ ವೆಬ್ ಪೇಜ್ ಏಕಾಏಕಿ ಜನಪ್ರಿಯತೆಯನ್ನು ಪಡೆಯಲಾರಂಭಿಸಿತು.
ಪ್ರಾಚೀನ ಗ್ರಂಥ, ವೇದ, ಉಪನಿಷದ್ಗಳಲ್ಲಿನ ವಿಜ್ಞಾನ, ಜ್ಞಾನ ಭಂಡಾರದ ಬಗೆಗಿನ ಮಾಹಿತಿಯನ್ನು ವೆಬ್ ಪೇಜ್ನಲ್ಲಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.