ನವದೆಹಲಿ: ಸಿಂಗಾಪುರದಲ್ಲಿನ ಭಾರತೀಯ ಸಂಜಾತ ಬ್ಯಾಂಕರ್ ರವಿ ಮೆನನ್ ಅವರು 2018ರ ಏಷ್ಯಾ ಪೆಸಿಫಿಕ್ನ ಅತ್ಯುತ್ತಮ ಸೆಂಟ್ರಲ್ ಬ್ಯಾಂಕ್ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿಂಗಾಪುರದ ಸೆಂಟ್ರಲ್ ಬ್ಯಾಂಕ್ ‘ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ(ಎಂಎಎಸ್)ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ರವಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಯುಕೆ ಮೂಲದ ಪ್ರತಿಷ್ಠಿತ ‘ಡಿ ಬ್ಯಾಂಕರ್’ ಮ್ಯಾಗಜೀನ್ ಇವರನ್ನು 2018ರ ಏಷ್ಯಾ ಫಿಸಿಫಿಕ್ನ ಅತ್ಯುತ್ತಮ ಸೆಂಟ್ರಲ್ ಬ್ಯಾಂಕ್ ಗವರ್ನರ್ ಎಂದು ಹೆಸರಿಸಿದೆ.