ನವದೆಹಲಿ: ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಶಸ್ತ್ರಾಸ್ತ್ರ ಪಡೆಗಳ ಬಳಿಕ ಆರ್ಎಸ್ಎಸ್ ಈ ದೇಶದ ಜನರನ್ನು ಸುರಕ್ಷಿತವಾಗಿ ಇಟ್ಟಿದೆ, ಧರ್ಮದಿಂದ ಜಾತ್ಯಾತೀತತೆಯನ್ನು ದೂರವಿರಿಸಬಾರದು ಎಂದು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಕೆ.ಟಿ.ಥೋಮಸ್ ಹೇಳಿದ್ದಾರೆ.
ಕೊಟ್ಟಾಯಂನಲ್ಲಿ ಆರ್ಎಸ್ಎಸ್ ಸಲಹೆಗಾರರ ತರಬೇತಿ ಕ್ಯಾಂಪ್ನಲ್ಲಿ ಮಾತನಾಡಿದ ಅವರು, ‘ತುರ್ತು ಪರಿಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಿದ ಕೀರ್ತಿ ಯಾವುದಾದರು ಸಂಘಟನೆಗೆ ನೀಡಬೇಕಿದ್ದರೆ ಅದು ಆರ್ಎಸ್ಎಸ್ಗೆ ಮಾತ್ರ’ ಎಂದರು.
’ದೇಶದ ರಕ್ಷಣೆಗಾಗಿ ಸಂಘ ತನ್ನ ಸ್ವಯಂಸೇವಕರಿಗೆ ಶಿಸ್ತನ್ನು ಕಲಿಸುತ್ತದೆ ಎಂದು ಭಾವಿಸಿದ್ದೇನೆ. ಹಾವುಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ವಿಷವೆಂಬ ಆಯುಧವಿರುತ್ತದೆ. ಅದೇ ರೀತಿ ಮನುಷ್ಯ ಸಾಮರ್ಥ್ಯ ಹೊಂದುವುದು ತನ್ನನ್ನು ತಾನು ರಕ್ಷಿಸಲು ಬೇರೆಯವರಿಗೆ ದಾಳಿ ಮಾಡಲು ಅಲ್ಲ. ದಾಳಿಗಳನ್ನು ಸಮರ್ಥವಾಗಿ ಎದುರಿಸಲು ದೈಹಿಕ ಸಾಮರ್ಥ್ಯವನ್ನು ಬೋಧಿಸುತ್ತಿರುವ ಮತ್ತು ನಂಬುತ್ತಿರುವ ಆರ್ಎಸ್ಎಸ್ನ್ನು ನಾನು ಶ್ಲಾಘಿಸುತ್ತೇನೆ’ ಎಂದಿದ್ದಾರೆ.