ನವದೆಹಲಿ: ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್ನ 5 ಶಾಸಕರು ಸೇರಿದಂತೆ ಮೇಘಾಲಯದ ಒಟ್ಟು 8 ಶಾಸಕರು ಎನ್ಡಿಎಯ ಭಾಗವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ಪಿಪಿ)ಯನ್ನು ಸೇರಿದ್ದಾರೆ.
ಗುರುವಾರ ಸಮಾವೇಶದ ಸಂದರ್ಭ ಇವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ಎನ್ಪಿಪಿ ಹೇಳಿದೆ.
ಎನ್ಪಿಪಿಯ ರಾಷ್ಟ್ರಾಧ್ಯಕ್ಷ ಕಾನ್ರಡ್.ಕೆ.ಸಂಗ್ಮ ಅವರು ಸಮಾವೇಶವನ್ನು ಆಯೋಜನೆಗೊಳಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.