ನವದೆಹಲಿ: ವ್ಯವಸ್ಥಿತವಾಗಿ ಅಪರಾಧಗಳನ್ನು ಎಸಗುವ ಸಿಂಡಿಕೇಟ್ವೊಂದು ಕಿನ್ಯಾದ ಮೊಂಬಸದಲ್ಲಿ ಒತ್ತೆ ಇರಿಸಿಕೊಂಡಿದ್ದ 3 ಭಾರತೀಯ ಯುವತಿಯರು ಸೇರಿದಂತೆ ಒಟ್ಟು 10 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಯುವತಿಯರ ಕಳ್ಳ ಸಾಗಾಣೆಯಲ್ಲಿ ತೊಡಗಿರುವ ಕ್ರೈಂ ಸಿಂಡಿಕೇಟ್ನ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಪಾರು ಮಾಡಿದವರಲ್ಲಿ 7 ನೇಪಾಳಿಗರು ಮತ್ತು 3 ಭಾರತೀಯ ಯುವತಿಯರಾಗಿದ್ದಾರೆ.
‘ಈ ಯುವತಿಯರ ಪಾಸ್ಪೋರ್ಟ್, ಫೋನ್ಗಳನ್ನು ಕಸಿದು ಅವರನ್ನು ಮೊಂಬಸದಲ್ಲಿ ಒತ್ತೆಯಾಗಿ ಈ ಕ್ರೈಂ ಸಿಂಡಿಕೇಟ್ ಇರಿಸಿಕೊಂಡಿತ್ತು. ಈ ಬಗೆಗಿನ ವಿವರಗಳನ್ನು ಪಂಜಾಬ್ ಸರ್ಕಾರಕ್ಕೆ ನೀಡಿದ್ದೇವೆ. ಸಿಂಡಿಕೇಟ್, ಅದರ ಜನರ ವಿರುದ್ಧ ಪ್ರಕರಣ ಹಾಕಲಾಗಿದೆ’ ಎಂದು ಸುಷ್ಮಾ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.