ಮಧುರೈ: ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ. ಹೌದು ಈ ಜಪಾನಿ ಜೋಡಿಯ ವಿವಾಹವೂ ಸ್ವರ್ಗದಲ್ಲೇ ನಿಶ್ಚಯವಾಗಿತ್ತು, ಆದರೆ ಅದಕ್ಕೆ ಅಧಿಕೃತ ಮುದ್ರೆ ಒತ್ತಲು ಅವರು ಬಂದಿದ್ದು ದೇಗುಲ ನಗರಿ ಮಧುರೈಗೆ. ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಇವರು ಸತಿಪತಿಗಳಾಗಿದ್ದಾರೆ.
ತಮಿಳು ಸಂಸ್ಕೃತಿಗೆ ಮನಸೋತ ವರ ಚಿಹಾರು ಒಬಟ ಮತ್ತು ವಧು ಯುಟೊ ನಿನಗ ಟೋಕಿಯೋದಿಂದ ಮಧುರೈಗೆ ಹಾರಿ ಬಂದು ಅಪ್ಪಟ ತಮಿಳುನಾಡಿನ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.
ಒಬಟ ಅವರು 2014ರಿಂದ ತಮಿಳುನಾಡಿನಲ್ಲಿ ಭಾಷಾ ಸಂಶೋಧನೆ ನಡೆಸುತ್ತಿದ್ದಾರೆ, ಹೀಗಾಗಿ ಅವರಲ್ಲಿ ತಮಿಳು ಸಂಸ್ಕೃತಿಯ ಬಗ್ಗೆ ಪ್ರೀತಿ ಹುಟ್ಟಿದೆ. ಮದುವೆಯನ್ನೂ ಇದೇ ಸಂಪ್ರದಾಯದಲ್ಲಿ ಮಾಡಬೇಕೆಂದು ಅವರು ಬಯಸಿದ್ದರು.
ಜಪಾನಿ ಜೋಡಿಯ ತಮಿಳು ಶೈಲಿಯ ಮದುವೆ ಫೋಟೋಗಳು ಇಂಟರ್ನೆಟ್ಗಳಲ್ಲಿ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ.