ವಾಷಿಂಗ್ಟನ್: ಪಾಕಿಸ್ಥಾನ ಅಮೆರಿಕಾದೊಂದಿಗೆ ಅನೇಕ ವರ್ಷಗಳಿಂದ ಡಬಲ್ ಗೇಮ್ ಆಡುತ್ತಾ ಬಂದಿದೆ ಎಂದು ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿ ನಿಕ್ಕಿ ಹಾಲೆ ಆರೋಪಿಸಿದ್ದು, ಡೊನಾಲ್ಡ್ ಟ್ರಂಪ್ ಆಡಳಿತ ಇದನ್ನು ಎಂದಿಗೂ ಒಪ್ಪಲಾರದು ಎಂದಿದ್ದಾರೆ.
ಪಾಕಿಸ್ಥಾನಕ್ಕೆ ಅಮೆರಿಕಾ ನೀಡುತ್ತಿದ್ದ ಯುಎಸ್ಟು 255 ಮಿಲಿಯನ್ ಮಿಲಿಟರಿ ಅನುದಾನವನ್ನು ರದ್ದುಗೊಳಿಸಿದ ಟ್ರಂಪ್ ಕ್ರಮವನ್ನು ಹಾಲೆ ಸಮರ್ಥಿಸಿಕೊಂಡಿದ್ದಾರೆ.
ಪಾಕಿಸ್ಥಾನ ಡಬಲ್ ಗೇಮ್ ಆಡಿದ ಕಾರಣದಿಂದಲೇ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ಥಾನಿಯರು ನಮ್ಮೊಂದಿಗೆ ಕಾರ್ಯನಿರ್ವಹಿಸುತ್ತಲೇ ಅಫ್ಘಾನಿಸ್ತಾನದಲ್ಲಿದ್ದ ನಮ್ಮ ಸೇನಾಪಡೆಯ ಮೇಲೆ ಉಗ್ರರು ದಾಳಿ ನಡೆಸಲು ಸಹಾಯ ಮಾಡುತ್ತಿದ್ದರು. ಅಂತಹ ಆಟವನ್ನು ನಮ್ಮ ಆಡಳಿತ ಒಪ್ಪುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.