ನವದೆಹಲಿ: ಜಂಟಿಯಾಗಿ ಮೌಂಟ್ ಎವರೆಸ್ಟ್ನ ಎತ್ತರವನ್ನು ಅಳೆಯುವ ಬಗ್ಗೆ ಭಾರತ ನೀಡಿದ್ದ ಆಫರ್ನ್ನು ತಿರಸ್ಕರಿಸಿರುವ ನೇಪಾಳ ಇದೀಗ ಏಕಾಂಗಿಯಾಗಿ ವಿಶ್ವದ ಅತೀ ಎತ್ತರದ ಹಿಮಾಲಯದ ಎತ್ತರವನ್ನು ಅಳತೆ ಮಾಡಲು ಮುಂದಾಗಿದೆ.
2015ರ ಭೂಕಂಪದ ಹಿನ್ನಲೆಯಲ್ಲಿ ಹಿಮಾಲಯದ ಎತ್ತರವನ್ನು ಅಳತೆ ಮಾಡಲು ನೇಪಾಳ ನಿರ್ಧರಿಸಿದೆ, ಇದಕ್ಕಾಗಿ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ. ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯಲು ಬರೋಬ್ಬರಿ ಎರಡು ವರ್ಷಗಳು ಬೇಕಾಗಿದೆ. ಇದಕ್ಕೆ ರೂ.250 ಮಿಲಿಯನ್ ಖರ್ಚಾಗಲಿದೆ ಎನ್ನಲಾಗಿದೆ.
ಭಾರತ ಜಂಟಿಯಾಗಿ ಅಳತೆ ಮಾಡುವ ಆಫರ್ ನೀಡಿತ್ತಾದರೂ ನೇಪಾಳ ಇದನ್ನು ತಿರಸ್ಕರಿಸಿ, ನಾವು ಸ್ವಂತ ಬಲದಲ್ಲಿ ಅಳತೆ ಕಾರ್ಯ ನಡೆಸಲಿದ್ದೇವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.