ನವದೆಹಲಿ: ಗೋವುಗಳ ಸಂರಕ್ಷಣೆಗಾಗಿ ಸಾವಿರಾರು ಗೋಶಾಲೆಗಳನ್ನು ದೇಶದಲ್ಲಿ ನಡೆಸಲಾಗುತ್ತಿದೆ. ಆದರೆ ಕಡಿಮೆ ಗುಣಮಟ್ಟದಲ್ಲಿ ಕೆಲವೊಂದು ಗೋ ಶಾಲೆಗಳು ಕಾರ್ಯಾಚರಿಸುತ್ತಿದ್ದು, ಇಲ್ಲಿ ಕರು, ಹಸುಗಳ ಸಾವಿನ ಪ್ರಮಾಣವೂ ಅಧಿಕ ಪ್ರಮಾಣದಲ್ಲಿದೆ.
ಈ ಬಗ್ಗೆ ಕಳವಳ ವ್ಯಕ್ತಸಿರುವ ಪ್ರಾಣಿ ಪ್ರಿಯೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು, ಗೋಶಾಲೆಗಳ ನಿರ್ವಹಣೆಗೆ ಅನುಸರಿಸಬಹುದಾದ ಗುಣಮಟ್ಟ, ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕ ಬರೆದಿದ್ದಾರೆ.
‘ಗೋಶಾಲೆ ದೇಗುಲವಿದ್ದಂತೆ, ಆದರೆ ಅಲ್ಲಿ ಕಳಪೆ ರೀತಿಯಲ್ಲಿ ಗೋವುಗಳ ಸಾಕಾಣಿಕೆ ನಡೆಯುತ್ತಿದೆ. ಇದು ಆಗಬಾರದು’ ಎಂದಿದ್ದಾರೆ.
ದೇಶದಲ್ಲಿ ಒಟ್ಟು 3,030 ಗೋಶಾಲೆಗಳು ಕಾರ್ಯಾಚರಿಸುತ್ತಿದೆ ಎಂದು ಸರ್ಕಾರ 2014ರಲ್ಲಿ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.