ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಇದೀಗ ತನ್ನದೇ ಆದ ಲೋಗೋವನ್ನು ಪಡೆದುಕೊಂಡಿದೆ, ‘Bengaluru – Be U’ (be you)’ ಎಂಬ ಬರಹವುಳ್ಳ ಲೋಗೋ ಜಾಗತಿಕ ವೇದಿಕೆಯಲ್ಲಿ ನಗರಕ್ಕೆ ಇಮೇಜ್ ತಂದುಕೊಡಲಿದೆ. ಅಲ್ಲದೇ ಲೋಗೋ ಪಡೆದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ತನ್ನದೇ ಸ್ವಂತ ಐಡೆಟಿಂಟಿ ಬ್ಯಾಡ್ಜ್ ಪಡೆಯುತ್ತಿರುವ ಬೆಂಗಳೂರಿನ ಲೋಗೋವನ್ನು 1,350 ಎಂಟ್ರಿಗಳ ಪೈಕಿ ಆರಿಸಲಾಗಿದೆ. ಈ ಲೋಗೋ ನಗರದ ಕಾಸ್ಮೋಪಾಲಿಟನ್ ಕಲ್ಚರ್, 480 ವರ್ಷಗಳ ಇತಿಹಾಸ, ಭವಿಷ್ಯದ ಹೊರನೋಟವನ್ನು ಅನಾವರಣಗೊಳಿಸಿದೆ.
ಲೋಗೋವನ್ನು ಬೆಂಗಳೂರಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಳಸಿಕೊಳ್ಳುವುದಾಗಿ ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ವಿನ್ಯಾಸ ಸಂಸ್ಥೆ ‘ನಮ್ಮೂರ್’ನ ರುಶಿ ಪಟೇಲ್ ಮತ್ತು ಎಂ.ವೆಂಕಟೇಶ್ವರ ರಾವ್ ‘ಬೆಂಗಳೂರು-ಬಿ ಯು’ ಲೋಗೋ ವಿನ್ಯಾಸಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.