ನವದೆಹಲಿ: ರಾಜ್ಯಸಭಾ ಸಭಾಪತಿಯಾಗಿರುವ ಎಂ.ವೆಂಕಯ್ಯ ನಾಯ್ಡು ಅವರು ಮೊದಲ ದಿನವೇ ಅಧಿವೇಶದಲ್ಲಿನ ಕೆಲವೊಂದು ನಿಯಮಗಳನ್ನು ಬದಲಾಯಿಸಿದ್ದಾರೆ.
ಕಾಗದ ಪತ್ರಗಳನ್ನು ಟೇಬಲ್ ಮೇಲಿಡುವಾಗ ಬ್ರಿಟಿಷ್ ಕಾಲದ ನಿಯಮಗಳನ್ನು ಪಾಲಿಸದಂತೆ ಅವರು ಸದಸ್ಯರಿಗೆ ಸೂಚಿಸಿದ್ದಾರೆ.
ಕಾಗದ ಪತ್ರಗಳನ್ನು ಟೇಬಲ್ ಮೇಲಿಡುವಾಗ ‘ಐ ಬೆಗ್ ಟು’ (ನಾನು ಬೇಡುತ್ತೇನೆ) ಎಂಬ ಪದವನ್ನು ಬಳಸುವ ರೂಢಿಯಿದೆ. ಇದನ್ನು ಇನ್ನುಮುಂದೆ ಬಳಸಬೇಡಿ ಇದು ಸ್ವತಂತ್ರ ಭಾರತ, ವಸಾಹತುಶಾಹಿ ಭಾರತವಲ್ಲ ಎಂದಿದ್ದಾರೆ.
ಅಲ್ಲದೇ ಇದು ನನ್ನ ಸಲಹೆಯಷ್ಟೇ ಯಾವುದೇ ಆದೇಶವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಶ್ರದ್ಧಾಂಜಲಿ ಓದುವಾಗ ಎದ್ದು ನಿಂತು ಅವರು ಗೌರವ ಸೂಚಿಸಿದ್ದಾರೆ. ಈ ಹಿಂದಿನವರು ಎದ್ದು ನಿಲ್ಲುತ್ತಿರಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.