ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದ್ದು, ಹಿಮಾಚಲಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದಿವೆ.
ಟೈಮ್ಸ್ ನೌ-ವಿಎಂಆರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ ಗುಜರಾತಿನಲ್ಲಿ 109 ಸ್ಥಾನ ಪಡೆಯಲಿದೆ, ಕಾಂಗ್ರೆಸ್ 70, ಇತರರು 3 ಸ್ಥಾನ ಪಡೆಯಲಿದ್ದಾರೆ. ಹಿಮಾಚಲದಲ್ಲಿ ಬಿಜೆಪಿ 51, ಕಾಂಗ್ರೆಸ್ 16, ಇತರರು 1 ಸ್ಥಾನ ಪಡೆಯಲಿದ್ದಾರೆ.
ನ್ಯೂಸ್ ಎಕ್ಸ್ ಪ್ರಕಾರ ಗುಜರಾತಿನಲ್ಲಿ ಬಿಜೆಪಿ 110-120 ಸ್ಥಾನ ಪಡೆಯಲಿದೆ, ಕಾಂಗ್ರೆಸ್ 65-75 ಸ್ಥಾನ ಪಡೆಯಲಿದೆ. ಇತರರು 2-4 ಸ್ಥಾನ ಪಡೆಯಲಿದ್ದಾರೆ. ಹಿಮಾಚಲದಲ್ಲಿ ಬಿಜೆಪಿ 47-55, ಕಾಂಗ್ರೆಸ್ 18-24 ಸ್ಥಾನ ಪಡೆಯಲಿದೆ.
ಸಿ ವೋಟರ್ಸ್ ಪ್ರಕಾರ ಗುಜರಾತಿನಲ್ಲಿ ಬಿಜೆಪಿ 108 , ಕಾಂಗ್ರೆಸ್ 74 ಸ್ಥಾನ ಪಡೆಯಲಿದೆ.
ಗುಜರಾತಿನಲ್ಲಿ 182 ವಿಧಾನಸಭಾ ಸ್ಥಾನಗಳಿವೆ. ಹಿಮಾಚಲದಲ್ಲಿ 68ಸ್ಥಾನಗಳಿವೆ. ಎರಡೂ ಕಡೆಯು ಬಿಜೆಪಿ ಸರಳ ಬಹುಮತ ಪಡೆದು ಸರ್ಕಾರ ರಚಿಸುತ್ತದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ಅಂತಿಮವಾಗಿ ಫಲಿತಾಂಶ ಡಿ.18ರಂದು ಪ್ರಕಟವಾಗಲಿದ್ದು, ಸಮೀಕ್ಷೆಗಳ ನಿಖರತೆ ಬಹಿರಂಗವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.