ಕೋಲ್ಕತ್ತಾ: ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಹುತಾತ್ಮರಾದ 1,654 ಭಾರತೀಯ ಯೋಧರ ವಶಂಸ್ಥರಿಗೆ ಸನ್ಮಾನ ಮಾಡುವುದಾಗಿ ಬಾಂಗ್ಲದೇಶ ಘೋಷಿಸಿದೆ.
2018ರಲ್ಲಿ ಸನ್ಮಾನ ಕಾರ್ಯ ನಡೆಯಲಿದ್ದು, ಬಾಂಗ್ಲಾ ಅಧ್ಯಕ್ಷ, ಪ್ರಧಾನಿಗಳ ಸಹಿವುಳ್ಳ ಬೆಳ್ಳಿಯ ಸ್ಮರಣಿಕೆಯನ್ನು ನೀಡಿ ಗೌರವಿಸಲಿದೆ. ಈ ಹಿಂದೆ ಚೆಕ್ನ್ನು ನೀಡುವ ಪ್ರಸ್ತಾಪವನ್ನು ಬಾಂಗ್ಲಾ ಮುಂದಿಟ್ಟಿತ್ತು. ಆದರೆ ಹುತಾತ್ಮರ ವಂಶಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸ್ಮರಣಿಕೆ ಮಾತ್ರ ನೀಡಲಾಗುತ್ತಿದೆ.
ಈ ಯುದ್ಧದಲ್ಲಿ ಗೆದ್ದ ದಿನವನ್ನು ಬಾಂಗ್ಲಾದೇಶ್ ವಿಜಯ್ ಉತ್ಸವ್ ಆಗಿ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.