ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ ಅವರನ್ನು ಭೇಟಿಯಾಗಲು ಅವರ ಪತ್ನಿಯೊಂದಿಗೆ ತಾಯಿಗೂ ಅವಕಾಶವನ್ನು ಪಾಕಿಸ್ಥಾನ ನೀಡಿದೆ.
ಡಿ.25ರಂದು ಕುಲಭೂಷಣ್ ಅವರನ್ನು ತಾಯಿ ಮತ್ತು ಪತ್ನಿ ಅಲ್ಲಿನ ಭಾರತೀಯ ಹೈಕಮಿಷನರ್ ಸಿಬ್ಬಂದಿಗಳ ಸಮ್ಮುಖದಲ್ಲಿ ಭೇಟಿಯಾಗಲಿದ್ದಾರೆ.
ಈ ವಿಷಯವನ್ನು ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
‘ಕುಲಭೂಷಣ್ ತಾಯಿ ಮತ್ತು ಪತ್ನಿಗೆ ವೀಸಾ ನೀಡಿರುವ ಪಾಕಿಸ್ಥಾನ ಅವರ ಸುರಕ್ಷತೆ, ಭದ್ರತೆ ಮತ್ತು ಸ್ವತಂತ್ರದ ಬಗ್ಗೆ ಭರವಸೆ ನೀಡಿದೆ’ ಎಂದಿದ್ದಾರೆ.