ಅಹ್ಮದಾಬಾದ್: 22 ವರ್ಷಗಳ ಕಾಲ ಗುಜರಾತ್ ಆಡಳಿತದಲ್ಲಿರುವ ಬಿಜೆಪಿ ಈ ಬಾರಿಯೂ ಅಲ್ಲಿ ಗೆಲುವಿನ ನಗೆಯನ್ನು ಬೀರಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಅಬ್ಬರದ ಪ್ರಚಾರದೊಂದಿಗೆ ತಂತ್ರಜ್ಞಾನದ ಮೂಲಕವೂ ಜನರನ್ನು ತಮ್ಮತ್ತ ಆಕರ್ಷಿಸುತ್ತಿದೆ.
ಅಹ್ಮದಾಬಾದ್ನ ಸಬರಮತಿ ನದಿ ಸಮೀಪ ಬಿಜೆಪಿ ವಿಭಿನ್ನ ಶೈಲಿಯ ಪ್ರಚಾರವನ್ನು ನಡೆಸಿದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮ್ಯಾಪ್ನ ದೊಡ್ಡ ಲೇಸರ್ ಲೈಟ್ ಕಟೌಟ್ಗಳನ್ನು ಹಾಕಿ ಜನರನ್ನು ಆಕರ್ಷಿಸಿದೆ.
‘ಈ ವಿಭಿನ್ನ ಶೈಲಿಗೆ ಪ್ರೊಜೆಕ್ಷನ್ ಮ್ಯಾಪಿಂಗ್ ಎಂದು ಕರೆಯಲಾಗುತ್ತದೆ, ಕಟೌಟ್ನಲ್ಲಿ ಪ್ರೊಜೆಕ್ಷನ್ ಹಾಕಿ ಇದರಲ್ಲಿ ಗುಜರಾತ್ನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗೆಗಿನ ಜಲಕ್ ತೋರಿಸಲಾಗುತ್ತದೆ’ ಎಂದು ಬಿಜೆಪಿ ನಾಯಕ ಅನಿಲ್ ಜಾ ಹೇಳಿದ್ದಾರೆ.
ಒಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿ ಪ್ರಚಾರ ಕಾರ್ಯ ನಡೆಸುವುದರಲ್ಲಿ ಬಿಜೆಪಿ ಇತರ ಎಲ್ಲಾ ಪಕ್ಷಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.