ನವದೆಹಲಿ: ಇಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತಿದ್ದು, ದೇಶದಾದ್ಯಂತ ಸೇನೆಯ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸಲಾಗುತ್ತಿದೆ.
ಯೋಧರ, ನಾವಿಕರ ಗೌರವಾರ್ಥವಾಗಿ 1949 ರಿಂದ ಪ್ರತಿ ಡಿ.7ರಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಅಲ್ಲದೇ ಈ ದಿನವನ್ನು ಯೋಧರಿಗಾಗಿ, ಅವರ ಕುಟುಂಬಕ್ಕಾಗಿ ಅನುದಾನ ಸಂಗ್ರಹಿಸಲೂ ಬಳಸಿಕೊಳ್ಳಲಾಗುತ್ತದೆ.
ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು, ಗಣ್ಯರು ಭಾರತೀಯ ಸೇನೆಯ ಪರಾಕ್ರಮವನ್ನು ಸ್ಮರಿಸಿದ್ದು, ಯೋಧರ ಕಲ್ಯಾಣಕ್ಕಾಗಿ ಸಹಾಯ ಹಸ್ತ ಚಾಚುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮಿಳುನಾಡು ರಾಜ್ಯಪಾಲರು ರೂ.25,000 ಸೇರಿದಂತೆ ಅನೇಕ ಗಣ್ಯರು ಸೇನೆಗೆ ಅನುದಾನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.