ಕೋಲ್ಕತ್ತಾ: ಜಮ್ಮು ಕಾಶ್ಮೀರದ ಭಾಗ ಪಾಕ್ಗೆ ಸೇರಿದ್ದು, ಅರುಣಾಚಲದ ಭಾಗ ಚೀನಾಗೆ ಸೇರಿದ್ದು ಎಂದು ಬಿಂಬಿಸುವ ಭೂಪಟವೊಂದನ್ನು ಪಶ್ಚಿಮಬಂಗಾಳದ ಶಾಲಾ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಅಲ್ಲಿನ ಆಡಳಿತರೂಢ ತೃಣಮೂಲಕ ಕಾಂಗ್ರೆಸ್ ಪಕ್ಷದ ಶಿಕ್ಷಕರ ಮಂಡಳಿಯೇ ಈ ಎಡವಟ್ಟನ್ನು ಮಾಡಿದೆ.
ಹಂಚಿರುವ ಭೂಪಟದ ಮೇಲೆ ಪಶ್ಚಿಮಬಂಗಳ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನ ವಾಟರ್ ಮಾರ್ಕ್ ಕೂಡ ಇದೆ.
ಈ ಕೃತ್ಯವನ್ನು ಬಿಜೆಪಿ ಕಟುವಾಗಿ ಖಂಡಿಸಿದ್ದು, ಚೀನಾ ಮತ್ತು ಪಾಕಿಸ್ಥಾನದ ನಿಲುವನ್ನು ಟಿಎಂಸಿ ಸಮರ್ಥಿಸಿಕೊಳ್ಳುತ್ತಿದೆಯೇ ಎಂಬುದನ್ನು ಆ ಪಕ್ಷ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.
ಪಶ್ಚಿಮಬಂಗಾಳದಲ್ಲಿ ಪ್ರಜಾಪ್ರಭುತ್ವ ಎಂಬುದು ಇಲ್ಲ, ಕೇವಲ ಟಿಎಂಸಿ ಧೋರಣೆಯಂತೆ ಎಲ್ಲವೂ ನಡೆಯುತ್ತಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.