ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿತರಾಗಿರುವ ಯೋಧರುಗಳು ಚೀನಾದ ಖ್ಯಾತ ಫೋನ್ ಡಿವೈಸ್ ಮತ್ತು ಅಪ್ಲಿಕೇಶನ್ ಬಳಕೆ ಮಾಡದಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ.
ಚೀನಾ ಕೆಲವೊಂದು ಆ್ಯಪ್ ಗಳ ಮೂಲಕ ಭಾರತದ ಭದ್ರತಾ ಅನುಷ್ಠಾನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಸಿದೆ.
ಹೀಗಾಗೀ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿತರಾಗಿರುವ ಯೋಧರು ತಮ್ಮ ಸ್ಮಾರ್ಟ್ಗಳಲ್ಲಿನ ಕೆಲವೊಂದು ಆ್ಯಪ್ ಗಳನ್ನು ಡಿಲೀಟ್ ಮಾಡಬೇಕು ಅಥವಾ ರಿಫಾರ್ಮೆಟ್ ಮಾಡಿಕೊಳ್ಳಬೇಕು, ಇದರಿಂದ ಆನ್ಲೈನ್ ಬೇಹುಗಾರಿಕೆಗೆ ತಡೆ ಹಾಕಲು ಸಾಧ್ಯ ಎಂದಿದೆ.
ಒಟ್ಟು 42 ಆಪ್ಗಳನ್ನು ಅದು ತಿಳಿಸಿದ್ದು, ಅದರಲ್ಲಿ ವೀಚಾಟ್, ಟ್ರೂಕಾಲರ್, ವೀಬೋ, ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ಗಳು ಸೇರಿವೆ.