ಮುಂಬಯಿ: ಇನ್ಸುರೆನ್ಸ್ನಿಂದ ಹಿಡಿದು ಮೊಬೈಲ್ ಸಿಮ್ನವರೆಗೆ ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ವೋಟರ್ ಐಡಿಗಳಿಗೂ ಆಧಾರನ್ನು ಜೋಡಿಸಲು ಸರ್ಕಾರ ನಿರ್ಧರಿಸಿದೆ.
ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ನಕಲು ಐಡಿ, ಚುನಾವಣೆಗಳಲ್ಲಿ ಅಕ್ರಮ ಮಾಡುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ ಆಧಾರ್ ಜೋಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎನ್ವಿಎಸ್ಪಿ ಪೋರ್ಟಲ್ ಮೂಲಕ ಆಧಾರ್ ಲಿಂಕ್ ಮಾಡುವ ವಿಧಾನ
1: ಸರ್ಕಾರದ ಎನ್ವಿಎಸ್ಪಿ ಪೋರ್ಟಲ್ಗೆ ವಿಸಿಟ್ ಮಾಡಿ – http://www.nvsp.in
2: ನಿಮ್ಮ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕು – ರಾಜ್ಯ, ಜಿಲ್ಲೆ, ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು
3: ಎಲ್ಲಾ ಮಾಹಿತಿಗಳನ್ನು ನೀಡಿದ ಬಳಿಕ, ‘Search’ ಬಟನ್ ಕ್ಲಿಕ್ ಮಾಡಿದಾಗ, ಅಲ್ಲಿ ನಿಮ್ಮ ದಾಖಲೆ ತೋರಿಸುತ್ತದೆ.
4: “Feed Aadhaar No.” ಬಟನ್ ಕ್ಲಿಕ್ ಮಾಡಿ. (ಪೇಜ್ನ ಎಡಭಾಗದಲ್ಲಿ ಸಿಗುತ್ತದೆ)
5: ಬಳಿಕ pop-up ಪೇಜ್ ಬರುತ್ತದೆ. ಅದರಲ್ಲಿ ನಿಮ್ಮ ಆಧಾರ್ ನಂಬರ್, ಹೆಸರು, EPIC ನಂಬರ್, ಅಧಿಕೃತ ಮೊಬೈಲ್ ನಂಬರ್ (registered mobile number) ಮತ್ತು ರಿಜಿಸ್ಟ್ರರ್ಡ್ ಇ-ಮೇಲ್ ಮಾಹಿತಿ ನೀಡಿ.
6: ಎಲ್ಲಾ ಮಾಹಿತಿ ನೀಡಿದ ಬಳಿಕ “submit” ಬಟನ್ ಕ್ಲಿಕ್ ಮಾಡಿ.
7: ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ಬಳಿಕ – ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಪುರಸ್ಕರಿಸಲಾಗಿದೆ ಎಂಬ ಸಂದೇಶ ಬರುತ್ತದೆ.
SMS ಮೂಲಕ ಆಧಾರ್ ಲಿಂಕ್
166 ಅಥವಾ 51969 ನಂಬರ್ಗಳಿಗೆ SMS ಮೂಲಕ ಆಧಾರ್ ಲಿಂಕ್ ಮಾಡಬಹುದಾಗಿದೆ.
< EPIC_ನಂಬರ್ > < ಆಧಾರ್ ನಂಬರ್ >
ಫೋನ್ ಮೂಲಕ ಆಧಾರ್ ಲಿಂಕ್
ಆಧಾರ್ ಲಿಂಕ್ ಪ್ರಕ್ರಿಯೆಗೆ ಸಹಾಯವಾಗಲೆಂದೇ ಮೀಸಲಾದ ಕಾಲ್ ಸೆಂಟರ್ಗಳಿವೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಮಾಹಿತಿಗಳನ್ನು ಲಿಂಕ್ ಮಾಡಲು 1950 ಗೆ ಕರೆ ಮಾಡಬಹುದು.
ಬೂತ್ ಮಟ್ಟದ ಕಛೇರಿಗಳಲ್ಲಿ ಆಧಾರ್ ಲಿಂಕ್
1: ನಿಮಗೆ ಹತ್ತಿರವಿರುವ ಬೂತ್ ಮಟ್ಟದ ಕಛೇರಿಯನ್ನು ಸಂಪರ್ಕಿಸಿ.
2: ಸಂಬಂಧಪಟ್ಟ ಅರ್ಜಿಯನ್ನು ಬೂತ್ ಮಟ್ಟದ ಅಧಿಕಾರಿಗೆ ನೀಡಿ.
3: ನೀವು ಕೊಟ್ಟ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು ಪರಿಶೀಲಿಸುತ್ತಾರೆ. ಪರಿಶೀಲನೆಯ ನಂತರ ನಿಮ್ಮ ದಾಖಲೆಗಳಲ್ಲಿ ಅದು ಪ್ರತಿಬಿಂಬಿಸಲ್ಪಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.