ನವದೆಹಲಿ: ಕೇಂದ್ರದ ಪ್ರವಾಸೋದ್ಯಮ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಲ್ಫೋನ್ಸ್ ಕನ್ನನ್ತಾನಂ ಅವರು ತಮಗೆ ನೀಡಿದ ’Y’ ಕೆಟಗರಿ ಸೆಕ್ಯೂರಿಟಿಯನ್ನು ನಿರಾಕರಿಸಿದ್ದಾರೆ.
y ಕೆಟಗರಿಯ ಭದ್ರತೆಯನ್ನು ನಿರಾಕರಿಸಿ ಅವರು ತಮ್ಮ ವೈಯಕ್ತಿ ಭದ್ರತಾ ಅಧಿಕಾರಿಗಳೊಂದಿಗೆ ಕಾರಿನಲ್ಲೇ ಪ್ರಯಾಣಿಸಿದ್ದಾರೆ.
ತಮಗೆ ಯಾವುದೇ ಹೆಚ್ಚುವರಿ ಭದ್ರತೆಯ ಅಗತ್ಯವಿಲ್ಲ, ಮಾನವ ಸಂಪನ್ಮೂಲವನ್ನು ಅನಗತ್ಯವಾಗಿ ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ.
ಅಲ್ಫೋನ್ಸ್ ಅವರು ಪ್ರಯಾಣಕ್ಕೂ ಬ್ಯುಸಿನೆಸ್ ಕ್ಲಾಸ್ ಬಳಸುವುದಿಲ್ಲ, ಎಲ್ಲಿ ಹೋದರೂ ಸರ್ಕಾರಿ ಗೆಸ್ಟ್ ಹೌಸ್ ಅಲ್ಲದೇ ಬೇರೆಲ್ಲೂ ಉಳಿದುಕೊಳ್ಳುವುದಿಲ್ಲ. ಅಲ್ಲದೇ ವೈಯಕ್ತಿಕ ಪ್ರಯಾಣಕ್ಕೆ ಅವರು ಸರ್ಕಾರಿ ವಾಹನಗಳನ್ನೂ ಬಳಸುವುದಿಲ್ಲ.
ತನ್ನ ಸರಳತೆಯ ಮೂಲಕ ಇವರು ಇತರ ಸಚಿವರುಗಳಿಗೂ ಮಾದರಿ ಎನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.