ಕಲೈಕುಂಡ: ಭಾರತ ದೇಶೀಯವಾಗಿ ನಿರ್ಮಿಸಿರುವ ಬಹು ಕಾರ್ಯಾಚರಣಾ ಲಘು ಯುದ್ಧ ವಿಮಾನ ತೇಜಸ್ ಬಗ್ಗೆ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್ಜಿ ಇಂಗ್ ಹೆನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹೆನ್ ಅವರು ಕಲೈಕುಂಡ ಏರ್ಬೇಸ್ನಲ್ಲಿ ಒಂದೂವರೆ ಗಂಟೆಗಳ ಕಾಲ ತೇಜಸ್ನ್ನು ಹಾರಿಸಿದರು. ಈ ಮೂಲಕ ಭಾರತದ ಯುದ್ಧ ವಿಮಾನದ ಹಾರಾಟವನ್ನು ನಡೆಸಿದ ವಿದೇಶದ ಮೊದಲ ಸಚಿವ ಎನಿಸಿದರು.
ತೇಜಸ್ ಹಾರಾಟಕ್ಕೆ ಅವಕಾಶ ದೊರಕಿದ್ದು ನನಗೆ ನೀಡಿರುವ ವಿಶೇಷ ಗೌರವವಾಗಿದೆ. ಇದು ಅತ್ಯದ್ಭುತ ಮತ್ತು ಪ್ರಭಾವಶಾಲಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ತೇಜಸ್ ಹಾರಾಟ ಮಾಡುವಾಗ ಕಾರನ್ನು ಚಲಾಯಿಸುತ್ತಿದ್ದೇನೆ ಎಂದೆನಿಸಿತು. ವಿಮಾನ ಹಾರಿಸುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
Privileged to be flown on the #Tejas, India’s own designed and manufactured fighter aircraft. A very good plane. #fighteraircraft @IAF_MCC pic.twitter.com/pFrJEjwu5D
— Ng Eng Hen (@Ng_Eng_Hen) November 28, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.