Monday, November 27th, 2017
News13
ಉಡುಪಿ : ಹಿಂದೂ ಸಮಾಜೋತ್ಸವದ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ ಮತ್ತು ಮಹೇಶ ಶೆಣೈ ನೇತೃತ್ವದಲ್ಲಿ ಆರ್ಗಾನಿಕ್ ಕ್ಲೀನಿಂಗ್ನ 35 ಮಂದಿ ಸದಸ್ಯರ ತಂಡ ಮೆರವಣಿಗೆಯ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಅಲ್ಲಲ್ಲಿ ಎಸೆದ ನೀರಿನ ಬಾಟಲಿ, ಪ್ಲಾಸ್ಟಿಕ್ ಲೋಟ, ಪೇಪರ್ ಲೋಟ, ಕಸಕಡ್ಡಿಗಳನ್ನು ಹೆಕ್ಕುತ್ತಿದ್ದರು. ಎಲ್ಲರೂ ಶೋಭಾಯಾತ್ರೆಯ ಸೊಬಗನ್ನು ಸವಿಯುತ್ತಿದ್ದರೆ ಇಲ್ಲಿ ಇವರು ತಮ್ಮ ಶುಚಿತ್ವದ ಕೆಲಸಲ್ಲಿಯೇ ದೇಶಪ್ರೇಮ ಕಾಣುತ್ತಿದ್ದರು.
ಒರ್ವ ಪುಟ್ಟ ಬಾಲಕ ಈ ತಂಡದ ಜೊತೆ ಕೈ ಜೋಡಿಸಿದ್ದು ಸ್ವಚ್ಛತೆಯ ಜಾಗೃತಿ ಎಲ್ಲರಲ್ಲೂ ಮೂಡಿಸುವಂತಾಗಿತ್ತು.
ಕೃಪೆ : ಸಾಸ್ತಾನ ಮಿತ್ರರು