ಅಸ್ಸಾಂ: ಆನೆಗಳು ರೈಲ್ವೆ ಟ್ರ್ಯಾಕ್ ಬಳಿ ಬಂದು ಸಾಗುತ್ತಿರುವ ರೈಲಿಗೆ ತಾಗಿ ಬಿದ್ದು ಸಾವನ್ನಪ್ಪುವ ಘಟನೆಗಳು ಅಸ್ಸಾಂನಲ್ಲಿ ಪದೇ ಪದೇ ನಡೆಯುತ್ತಿರುತ್ತದೆ. ಇದನ್ನು ತಡೆಗಟ್ಟಲು ನಾರ್ತ್ಈಸ್ಟ್ ಫ್ರಾಂಟಿಯರ್ ರೈಲ್ವೇ ಹಾಕಿದ್ದ ’ಪ್ಲಾನ್ ಎ’ ಸಂಪೂರ್ಣ ವೈಫಲ್ಯತೆ ಕಂಡಿದೆ. ಈ ಹಿನ್ನಲೆಯಲ್ಲಿ ’ಪ್ಲಾನ್ ಬೀ’ಯನ್ನು ಆರಂಭಿಸಿದ್ದು, ಅದೀಗ ಫಲ ಕೊಡುತ್ತಿದೆ.
ಆನೆಗಳ ನೈಸರ್ಗಿಕ ಶತ್ರುಗಳಾದ ಜೇಣು ನೊಣಗಳು ಕ್ರೋಧಗೊಂಡಿರುವಾಗ ಮಾಡುವಂತಹ ಶಬ್ದದ ಅಲರಾಂ ಸಿಸ್ಟಮ್ನ್ನು ಅಳವಡಿಸಿರುವುದೇ ’ಪ್ಲಾನ್ ಬೀ’ ಆಗಿದೆ. ರೈಲ್ವೇಯ 6 ಆನೆ ಕಾರಿಡಾರ್ಗಳಲ್ಲಿ ’ಪ್ಲಾನ್ ಬೀ’ಯನ್ನು ಅಳವಡಿಸಲಾಗಿದೆ.
ರೈಲಿನ ಆಗಮನದ ವೇಳೆ ಜೇನಿನ ಧ್ವನಿ ಇರುವ ಅಲರಾಂನ್ನು ಆನ್ ಮಾಡಲಾಗುತ್ತದೆ. ಇದಕ್ಕೆ ಹೆದರಿ ಆನೆಗಳು ರೈಲ್ವೇ ಹಳಿಗಳ ಸಮೀಪ ಬರುವುದಿಲ್ಲ. ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.
ಅಸ್ಸಾಂನಲ್ಲಿ 2016 ರಲ್ಲಿ ಒಟ್ಟು 16 ಆನೆಗಳು ಹಳಿಯಲ್ಲಿ ರೈಲಿಗೆ ತಾಗಿ ಬಿದ್ದು ಮರಣ ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.