ನವದೆಹಲಿ: ರಾಷ್ಟ್ರೀಯ ಔಷಧ ದರ ನಿಯಂತ್ರಕ ಎನ್ಪಿಪಿಎ ಒಟ್ಟು 51 ಅತಿ ಪ್ರಮುಖ ಔಷಧಗಳ ಬೆಲೆಯನ್ನು ಇಳಿಕೆ ಮಾಡಿದೆ. ಇವುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ, ನೋವು, ಹೃದಯ ಚಿಕಿತ್ಸೆ, ಚರ್ಮ ಸಮಸ್ಯೆಗಳಿಗೆ ಬಳಸುವ ವಷಧಗಳೂ ಸೇರಿವೆ.
ಶೇ. 6 ರಿಂದ ಶೇ.53ರಷ್ಟು ಪ್ರಮಾಣದಲ್ಲಿ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಎನ್ಪಿಪಿಎ ಹೇಳಿಕೆ.
ದರ ನಿಯಂತ್ರಕದ ಸುಪರ್ದಿಗೆ ಬರದ ಔಷಧಗಳ ಬೆಲೆಯಲ್ಲಿ ಉತ್ಪಾದಕರು ವಾರ್ಷಿಕ ಶೇ.10ರಷ್ಟು ಹೆಚ್ಚಳ ಮಾಡುವ ಅಧಿಕಾರವನ್ನು ಹೊಂದಿದ್ದಾರೆ.
1977ರಲ್ಲಿ ಎನ್ಪಿಪಿಎಗೆ ಔಷಧಿಗಳ ದರ ನಿಯಂತ್ರಣ, ಪರಿಷ್ಕರಣೆಗಳನ್ನು ಮಾಡುವ ಜವಬ್ದಾರಿಯನ್ನು ಒದಗಿಸಲಾಯಿತು.