ಬೀಜಿಂಗ್: ತನ್ನ ‘ಒನ್ ಬೆಲ್ಟ್ ಒನ್ ರೋಡ್’ ವಿಷಯವಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ಚೀನಾ ಒಲವು ತೋರಿಸಿದೆ. ಅಲ್ಲದೇ ಒಂದು ವೇಳೆ ಭಾರತ ಈ ಯೋಜನೆಯನ್ನು ಬೆಂಬಲಿಸಿದರೆ ಅದು ಭಾರತದ ಹಿತಾಸಕ್ತಿಗೆ ಅನುಗುಣವಾಗಿ ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ಗೆ ಮರು ನಾಮಕರಣ ಮಾಡಲು ಮುಂದಾಗಲಿದೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ಭಾರತದಲ್ಲಿನ ಚೀನಾದ ರಾಯಭಾರಿ ಲೂ ಝೌಹಿಯವರು, ಭಾರತದ ಹಿತಾಸಕ್ತಿಯನ್ನು ಪರಿಗಣಿಸಿ ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ಗೆ ಮರು ನಾಮಕರಣ ಮಾಡಲಾಗುವುದು ಎಂದಿದ್ದರು. ಅವರ ಈ ಮಾತನ್ನು ಬೀಜಿಂಗ್ ಪುಷ್ಟೀಕರಿಸಿದೆ.
ಇಸ್ಲಾಮಾಬಾದ್ನ್ನು ಬೇಸರಗೊಳಿಸದೆ ಮರು ನಾಮಕರಣ ಕಾರ್ಯವನ್ನು ಚೀನಾ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ, ನಾಥು ಲಾ ಪಾಸ್ ಅಥವಾ ನೇಪಾಳದ ಮೂಲಕ ಪರ್ಯಾಯ ಕಾರಿಡಾರ್ ರಚನೆಗೊಳಿಸಿ ಭಾರತದ ಕಾಳಜಿಯೊಂದಿಗೆ ಡೀಲ್ ಮಾಡಿಕೊಳ್ಳಲು ಬಯಸಿದೆ ಎಂಬುದನ್ನು ಭಾರತಕ್ಕೆ ಅದು ಈಗಾಗಲೇ ತಿಳಿಸಿದೆ.
ಭಾರತ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಬೆಂಬಲಿಸಿದರೆ, ಭಾರತದ ಹಿತಕ್ಕೆ ಅನುಗುಣವಾಗಿ ಚೀನಾ ಕಾರಿಡಾರ್ ರಚನೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.