ನವದೆಹಲಿ: 2019 ರ ವೇಳೆಗೆ ಬಯಲು ಶೌಚ ಮುಕ್ತಗೊಳ್ಳುವ ಗುರಿ ಹೊಂದಿರುವ ಭಾರತ ನವೆಂಬರ್ 19ರ ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಮೂರು ಕೇಂದ್ರಾಡಳಿತ ಪ್ರದೇಶ, ಎರಡು ರಾಜ್ಯಗಳ ನಗರ ಪ್ರದೇಶ ಮತ್ತು ಹಲವಾರು ನಗರಗಳನ್ನು ಬಯಲು ಶೌಚಮುಕ್ತವೆಂದು ಅಧಿಕೃತವಾಗಿ ಘೋಷಿಸಿದೆ.
ಇದೀಗ ಸ್ವಚ್ಛ ಭಾರತದಡಿ 8 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳು, 1789 ನಗರಗಳು, 44,606 ವಾರ್ಡ್ಸ್ಗಳು ಬಯಲು ಶೌಚ ಮುಕ್ತಗೊಂಡಿವೆ.
ಗುಜರಾತ್, ಹರಿಯಾಣ, ಉತ್ತರಾಖಂಡ್, ಮಿಝೋರಾಂ, ಪಂಜಾಬ್, ಕೇರಳ, ಹಿಮಾಚಲಪ್ರದೇಶ, , ಸಿಕ್ಕಿಂ ರಾಜ್ಯಗಳು ಬಯಲು ಶೌಚಮುಕ್ತಗೊಂಡಿವೆ.
ಛತ್ತೀಸ್ಗಢ, ಮಧ್ಯಪ್ರದೇಶ, ಆಂಧ್ರಪ್ರದೇಶ, ಚಂಡಿಗಢ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ದಾದ್ರಾ ನಾಗರ್ ಹವೇಲಿ ಪ್ರದೇಶಗಳು ಪಟ್ಟಿಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.