ನವದೆಹಲಿ: ಉತ್ತರ ಮತ್ತು ಪೂರ್ವ ಭಾಗದ ಗ್ರಾಮೀಣ ಪ್ರದೇಶಗಳು ನಿಧಾನವಾಗಿ ಆರ್ಥಿಕ ಸಬಲತೆಯನ್ನು ಪಡೆಯುತ್ತಿದೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಕ್ರೆಡಿಟ್ಗಳ ಹಂಚಿಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ.
ಕಳೆದ 4 ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬ್ಯಾಂಕ್ ಲೋನ್ಗಳ ಹಂಚಿಕೆಯಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಇಲ್ಲಿ ಸರ್ಕಾರವೂ ಜೀವನೋಪಾಯ ಯೋಜನೆಗಳನ್ನು ಬೆಂಬಲಿಸುತ್ತಿದೆ ಮತ್ತು ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸುತ್ತಿದೆ.
ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಶನ್ನಡಿ ಬರುವ 3.8 ಮಿಲಿಯನ್ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಕ್ರೆಡಿಟ್ಗಳು ಲೈಫ್ಲೈನ್ನಂತಾಗಿವೆ. ಬಡ ಬಹಿಳೆಯರು ಗುಂಪುಗಳನ್ನು ಕಟ್ಟಿಕೊಂಡು ಕೋಳಿ ಸಾಕಾಣಿಕೆ, ಡೈರಿ, ಮೀನುಗಾರಿಕೆ, ಸೀಡ್ ಬ್ಯಾಂಕ್, ಕರಕುಶಲ, ಕ್ಯಾಂಟೀನ್, ಆಹಾರ ಸಂಸ್ಕರಣಾಯಂತಹ ವ್ಯವಹಾರಗಳಿಗೆ ಬ್ಯಾಂಕ್ ಲೋನ್ ಪಡೆದು ಸಬಲರಾಗುತ್ತಿದ್ದಾರೆ.
ಪಶ್ಚಿಮಬಂಗಾಳ ಮತ್ತು ಬಿಹಾರ ಅಧಿಕ ಪ್ರಮಾಣದಲ್ಲಿ ಲೋನ್ಗಳನ್ನು ಪಡೆಯುತ್ತಿವೆ. ಮೈಕ್ರೋಫಿನಾನ್ಸ್ ಬಗ್ಗೆ ಈ ರಾಜ್ಯಗಳು ಇನ್ನೂ ಸಾಕಷ್ಟು ದೂರ ಕ್ರಮಿಸಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.