ನವದೆಹಲಿ: ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಂದ ಎಪ್ರಿಲ್-ಅಕ್ಟೋಬರ್ ನಡುವೆ ರೈಲ್ವೇಯು ಬರೋಬ್ಬರಿ ರೂ.100.67 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ರೈಲ್ವೇಯ ವಾಣಿಜ್ಯ ವಿಭಾಗವು ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ವಿಶೇಷ ಅಭಿಯಾನವನ್ನು ಆರಂಭಿಸಿದ ಹಿನ್ನಲೆಯಲ್ಲಿ ದಾಖಲೆಯ ಮಟ್ಟದಲ್ಲಿ ದಂಡವನ್ನು ಸಂಗ್ರಹಿಸಲಾಗಿದೆ.
2017ರ ಎಪ್ರಿಲ್-ಅಕ್ಟೋಬರ್ನಲ್ಲಿ ಇಂತಹ ಪ್ರಯಾಣಿಕರನ್ನು ಹತ್ತಿಕ್ಕುವ ಕಾರ್ಯವನ್ನು ನಡೆಸಿತ್ತು. ಈ ಅವಧಿಯಲ್ಲಿ 19.82 ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ. ಟಿಕೆಟ್ ಇಲ್ಲದೆ, ಅನಿಯಮಿತವಾಗಿ, ಲಗೇಜ್ ಬುಕ್ ಮಾಡದೇ ಇರುವವರಿಂದ ದಂಡ ಸಂಗ್ರಹಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.