ಬೆಂಗಳೂರು: ನೆಲ ಅಗೆಯುವಾಗ ಸಿಕ್ಕ 435 ಚಿನ್ನದ ನಾಣ್ಯಗಳನ್ನು ಮಹಿಳೆ ಪ್ರಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿ ದೊಡ್ಡತನ ಮೆರೆದಿದ್ದಾಳೆ.
ಬೆಂಗಳೂರಿನ ಲಕ್ಷ್ಮಮ್ಮ ಎಂಬ ಮಹಿಳೆಯ ಮನೆಗೆ ಕೌಂಪೌಂಡ್ ನಿರ್ಮಿಸುತ್ತಿದ್ದ ವೇಳೆ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಅಲ್ಲಿದ್ದವರಲ್ಲೇ ಇದನ್ನು ಚಿನ್ನದ ವ್ಯಾಪಾರಿಗೆ ಮಾರುವಂತೆ ಸಲಹೆ ನೀಡಿದರು. ಆದರೆ ಪ್ರಾಮಾಣಿಕಳಾದ ಆಕೆ ಹಾಗೆ ಮಾಡಲಿಲ್ಲ.
ಹಲಗೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಆಕೆ ಅದನ್ನು ಅವರಿಗೆ ಹಸ್ತಾಂತರ ಮಾಡಿದ್ದಾಳೆ.
ಇದು ಬಚ್ಚಿಟ್ಟ ಆಸ್ತಿ ಎಂದು ಆಕೆಗೆ ಸಮಜಾಯಿಸಿ ನೀಡಬಹುದಿತ್ತು ಅಥವಾ ಮೌನವಾಗಿ ಅದನ್ನು ಯಾರಿಗೂ ತಿಳಿಯದಂತೆ ಮಾಡಬಹುದಿತ್ತು. ಆದರೆ ಆ ರೀತಿ ಮಾಡದೆ ಆಕೆ ಪ್ರಮಾಣಿಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.