×
Home About Us Advertise With s Contact Us

ರೈಲ್ವೇ ಸುರಕ್ಷತೆಯ ಬಗೆಗಿನ ಪ್ರಶ್ನೆಗೆ ದಾಖಲೆ ಸಮೇತ ಉತ್ತರ ನೀಡಿದ ಸಚಿವ

ನವದೆಹಲಿ: ರೈಲ್ವೇಯಲ್ಲಿ ತೆಗೆದುಕೊಳ್ಳಲಾದ ಸುರಕ್ಷತಾ ಕ್ರಮಗಳ ಬಗ್ಗೆ ಕೊರಾ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಫೋಟೋಗ್ರಾಫ್, ಚಾರ್ಟ್‌ನ್ನು ಒಳಗೊಂಡ ಸವಿವರ ಉತ್ತರವನ್ನು ನೀಡಿ ಆಶ್ಚರ್ಯಗೊಳಿಸಿದ್ದಾರೆ.

ವಿಶ್ವದ ನಾಲ್ಕನೇ ಅತೀದೊಡ್ಡ ರೈಲ್ ನೆಟ್‌ವರ್ಕ್ ಎಂಬ ಖ್ಯಾತಿಯುಳ್ಳ ಭಾರತೀಯ ರೈಲ್ವೇ ಪ್ರತಿನಿತ್ಯ 23 ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ. ಈ ಪ್ರಯಾಣಿಕರು ಹಳಿ ತಪ್ಪುವಿಕೆಯಂತಹ ದುರಂತಗಳನ್ನೂ ಅನುಭವಿಸುತ್ತರೆ. 2016-17ರಲ್ಲಿ 78 ಹಳಿ ತಪ್ಪಿದ ದುರಂತ ನಡೆದಿದೆ, ಇದರಿಂದ 193 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಗೋಯಲ್, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಫೋಟೋ ಸಮೇತ ದಾಖಲೆಯುಳ್ಳ ಸವಿವರವನ್ನು ನೀಡಿ ಪ್ರಶ್ನೆ ಕೇಳಿದವರಿಗೆ ಆಶ್ಚರ್ಯ ಉಂಟು ಮಾಡಿದ್ದಾರೆ.

 

 

 

 

 

 

 

 

Recent News

Back To Top
error: Content is protected !!