ತಿರುವನಂತಪುರಂ: ‘ಕನಸಿನ ಹಾದಿಯಲ್ಲೇ ಯಶಸ್ಸಿನ ಅಸ್ತಿತ್ವ ಇರುತ್ತದೆ. ಇದನ್ನು ಕಂಡುಕೊಳ್ಳಲು ದೂರದೃಷ್ಟಿತ್ವ ಇರಬೇಕು, ದೈರ್ಯ ಇರಬೇಕು ಮತ್ತು ನುಸರಿಸಲು ಪರಿಶ್ರಮ ಇರಬೇಕು’ ಎಂಬ ಖ್ಯಾತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಮಾತನ್ನು ಸ್ಮರಿಸುತ್ತಾರೆ ಕೇರಳದ ಅಶ್ನಾ ಸುಧಾಕರ್. ಇತ್ತೀಚಿಗಷ್ಟೇ ಇವರಿಗೆ ಇಂಟರ್ನ್ಶಿಪ್ಗಾಗಿ ನಾಸಾದಿಂದ ಪತ್ರ ಬಂದಿದೆ.
ಕಲ್ಪನಾ ಚಾವ್ಲಾರ ಹಾದಿಯಲ್ಲೇ ಸಾಗಿರುವ ಆಶ್ನಾ, ತನ್ನ ಕನಸುಗಳು ಯಶಸ್ಸನ್ನು ಭೇಟಿಯಾಗುವ ಹಾದಿಯಲ್ಲೇ ಪಯಣಿಸುತ್ತಿದ್ದಾರೆ.
ಆಶ್ನಾ ಒರ್ವ ಬಾಹ್ಯಾಕಾಶ ವಿಜ್ಞಾನಿ ಅಥವಾ ಸಂಶೋಧಕಿಯಾಗಿ ತನ್ನನ್ನು ಪರಿಚಯಿಸಿಕೊಳ್ಳುವುದಿಲ್ಲ. ಆಕೆ ತಾನೊಬ್ಬ ಕನಸುಗಾರ್ತಿ ಎನ್ನುತ್ತಾಳೆ. ಭೂಮಂಡಲಕ್ಕೆ ಬೆಳಕು ನೀಡುವ ಸೂರ್ಯನನ್ನು ತಲುಪುವ ಕನಸು ಆಕೆಯದ್ದು. ಆಕಾಶ, ನಕ್ಷತ್ರಗಳ ಬಗ್ಗೆ ಬಾಲ್ಯದಿಂದಲೂ ಕುತೂಹಲ ಹುಟ್ಟಿಸಿಕೊಂಡಾಕೆ.
ನಾಸಾದಲ್ಲಿ ಅವರು ಸೋಲಾರ್ ರೇಡಿಯೋ ಬರ್ಸ್ಟ ಆಗಿ ಕಾರ್ಯ ಮಾಡುತ್ತಿದ್ದಾರೆ, ಡಾಟಾ ಅನಾಲಿಸಿಸ್ ಮಾಡುತ್ತಾರೆ, ಪ್ರಸ್ತಾವಿತ ಕಾರ್ಯಗಳ ಸಂಶೋಧನೆಯ ಫಲಿತಾಂಶದ ಕರಡನ್ನು ರಚಿಸುತ್ತಾರೆ.
ಇದಕ್ಕೂ ಮೊದಲು ಅವರು ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ ಗ್ರಾವಿಟಿ ವೇವ್ ಮತ್ತು ಅಯಾನುಗೋಳ ಭೌತಶಾಸ್ತ್ರದ ಬಗ್ಗೆ ಇಂಟರ್ನ್ಶಿಪ್ ಮಾಡಿದ್ದಾರೆ. ಕೊಡೈಕೆನಲ್ ಮತ್ತು ನೈನಿತಾಲ್ ಆರ್ಯಭಟ ರಿಸರ್ಚ್ ಸೆಂಟರ್ನಲ್ಲಿ ಸೋಲಾರ್ ಫಿಸಿಕ್ಸ್ ಅಬ್ಸರ್ವೆಟರಿ ಮೇಲೆ ಕಾರ್ಯ ಮಾಡಿದ್ದಾರೆ.