ಕಣ್ಣೂರು: ಉಗ್ರ ಸಂಘಟನೆ ಇಸಿಸ್ನೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಕೇರಳದ ಕಣ್ಣೂರಿನಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಈ ಹಿಂದೆ ಈ ಯುವರು ಪಿಎಫ್ಐ ಸಂಘಟನೆಯ ಸದಸ್ಯರಾಗಿದ್ದರು ಎನ್ನಲಾಗಿದೆ.
ಬಂಧಿತರನ್ನು ಮಿತಿಲಝ್, ಅಬ್ದುಲ್ ರಝಾಕ್, ರಶೀದ್ ಎಂ.ವಿ ಎಂದು ಗುರುತಿಸಲಾಗಿದೆ. ಸಿರಿಯಾದಲ್ಲಿ ಉಗ್ರ ತರಬೇತಿಯನ್ನು ಪಡೆಯುವ ಸಲುವಾಗಿ ಇವರುಗಳು ದೇಶ ಬಿಟ್ಟು ಹೋಗುವ ಪ್ರಯತ್ನದಲ್ಲಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಇವರ ಆನ್ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಿದ ವೇಳೆ ಇವರೆಲ್ಲಾ ಯೋಜನೆಗಳು ಬಯಲಿಗೆ ಬಂದಿದೆ. ಐಸಿಸ್ ಹೇಗೆ ಸೇರುವುದು, ಹೇಗೆ ತರಬೆತಿ ಪಡೆಯುವುದು ಎಂಬೆಲ್ಲಾ ಅಂಶಗಳನ್ನು ಇವರು ಕಲೆ ಹಾಕಿದ್ದರು ಎನ್ನಲಾಗಿದೆ.
ಸುಮಾರು 100 ಭಾರತೀಯ ಯುವಕರು ಐಸಿಸ್ ಸೇರಲು ದೇಶವನ್ನು ದೊರೆದಿದ್ದು, ಇವರಲ್ಲಿ ಬಹುತೇಕರು ಕೇರಳದವರೇ ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.