ಲಕ್ನೋ: ನಿರಂತರ ಎಚ್ಚರಿಕೆ, ಡೆಡ್ಲೈನ್ ದಿನಾಂಕಗಳ ವಿಸ್ತರಣೆಯ ಬಳಿಕವೂ ದಾಖಲೆ, ವಿವರಗಳನ್ನು ಮದರಸಾ ವೆಬ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ವಿಫಲವಾಗಿರುವ ಮದರಸಾಗಳನ್ನು ಮುಚ್ಚಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.
ಕಳೆದ ಆಗಸ್ಟ್ 18ರಂದು ಮದರಸ ವೆಬ್ ಪೋರ್ಟಲ್ನ್ನು ಯುಪಿ ಸರ್ಕಾರ ಹೊರತಂದಿತ್ತು. ಇದರಲ್ಲಿ ಎಲ್ಲಾ ಮದರಸಾಗಳು ತಮ್ಮ ಆಡಳಿತ, ಕಾರ್ಯವೈಖರಿ, ಅನುದಾನ, ಶಿಕ್ಷಕರು, ವಿದ್ಯಾರ್ಥಿಗಳ ಎಲ್ಲಾ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕು ಎಂದು ಆದೇಶಿಸಿತ್ತು.
ಇದಕ್ಕೆ ನೀಡಿದ ಡೆಡ್ಲೈನ್ಗಳನ್ನು ಇದುವರೆಗೆ ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ಆದರೂ ಹಲವು ಮದರಸಾಗಳು ಮಾಹಿತಿ ಸಲ್ಲಿಸಲು ವಿಫಲವಾಗಿವೆ.
ಯುಪಿಯ ಒಟ್ಟು 19 ಸಾವಿರ ಮದರಸಾಗಳ ಪೈಕಿ ಸುಮಾರು 2682 ಮದರಸಗಳು ಇನ್ನೂ ವೆಬ್ಸೈಟ್ಗೆ ವಿವರಗಳನ್ನು ಸಲ್ಲಿಸಿಲ್ಲ. ಇದೀಗ ಮತ್ತೊಮ್ಮೆ ಡೆಡ್ಲೈನ್ ವಿಸ್ತರಿಸಲು ಆಸಕ್ತಿಯಿಲ್ಲದ ಸರ್ಕಾರ ಮದರಸಾಗಳಿಗೆ ಬೀಗ ಜಡಿಯುವ ಕಾರ್ಯ ಮಾಡಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.