ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ಮೋದಿಗೆ ಶ್ರಮವಹಿಸಿ ಕೆಲಸಮಾಡುವ ವಿಭಿನ್ನ ಸಾಮರ್ಥ್ಯವಿದೆ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಏನು ಸಾಧಿಸಬೇಕೆಂಬ ಬಗ್ಗೆ ಮೋದಿಗೆ ತಿಳಿದಿದೆ, ಅದನ್ನು ಸಾಧಿಸಲು ಅವರು ಶ್ರಮಪಡುತ್ತಿದ್ದಾರೆ’ ಎಂದಿದ್ದಾರೆ.
’ಸಂಸತ್ತಿನೊಳಗೆ ಕೆಲವು ದಿನಗಳ ಕಾಲವೂ ಸೇವೆ ಸಲ್ಲಿಸಿದ ಅನುಭವ ಇಲ್ಲದೇ ನೇರವಾಗಿ ರಾಜ್ಯದಿಂದ ಸಂಸತ್ತಿಗೆ ಪ್ರವೇಶಿಸುವುದು ಅವರಿಗೆ ಸುಲಭದ ಕಾರ್ಯವಾಗಿರಲಿಲ್ಲ ಎಂಬುದನ್ನು ನಾವು ಮರೆಯಬಾರದು’ ಎಂದಿದ್ದಾರೆ.
ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ನಾಯಕರನ್ನು ಆಹ್ವಾನಿಸುವ ಬಗ್ಗೆ ಅವರು ನನಗೆ ಸಲಹೆ ನೀಡಿದ್ದರು. ಅದೊಂದು ವಿಭಿನ್ನ ಸಲಹೆಯಾಗಿತ್ತು, ಅದಕ್ಕೆ ನಾನು ಒಪ್ಪಿಕೊಂಡೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.